Header Ads
Header Ads
Breaking News

ಸಂಪೂರ್ಣ ಮೂಲಭೂತ ವಂಚಿತ ಹೆಜಮಾಡಿ ಟೋಲ್‌ಗೇಟ್. ಗಂಡಸರ ಶೌಚಾಲಯದೊಳಗೆ ನೆರೆ. ಮಹಿಳಾ ಶೌಚಾಲಯಕ್ಕೆ ಬಾಗಿಲೇ ಇಲ್ಲ.

ಕುಡಿಯುವ ನೀರು, ಶೌಚಾಲಯ, ಸ್ವಚ್ಚತೆ ಯಾವುದಕ್ಕೂ ಆದ್ಯಾತೆ ನೀಡದೆ ಸುಂಕ ವಸೂಲಿ ನಡೆಸುತ್ತಿರುವ ನವಯುಗ್ ಕಂಪನಿಗೆ ಸಂಬಂಧಪಟ್ಟ ಹೆಜಮಾಡಿ ಟೋಲ್‌ಗೇಟ್ ಮೂಲಭೂತ ವಂಚಿತ ತಾಣವಾಗಿದೆ.ಪ್ರಮುಖವಾಗಿ ಇರಲೇ ಬೇಕಾಗಿದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಿಲ್ಲ. ಗಂಡಸರ ಶೌಚಾಲಯದೋಳಗೆ ಹೋಗುವಂತ್ತಿಲ್ಲ, ಕಾರಣ ಶೌಚಾಯದ ಹೊಂಡಕ್ಕೆ ಹೋಗಬೇಕಾಗಿದ್ದ ನೀರು ಹೊಂಡದಿಂದ ಹಿಂದೆ ಹೊರ ಬರುತ್ತಿದೆ, ಕಾರಣ ಅದೇಷ್ಟೋ ದಿನಗಳ ಹಿಂದೆ ಶೌಚಾಯದ ಹೊಂಡ ತುಂಬಿ ಹೋಗಿದೆ, ಮಹಿಳೆಯರ ಶೌಚಾಲಯಕ್ಕೆ ಬಾಗಿಲೇ ಇಲ್ಲ ಎಂಬುದು ಒಂದು ಕಡೆಯಾದರೆ, ನಳ್ಳಿಯಲ್ಲಿ ನೀರು ಬರುತ್ತಿಲ್ಲ ಎಂಬ ಸಮಸ್ಯೆ ಮತ್ತೊಂದು ಕಡೆ.

  ಟೋಲ್‌ಗೇಟ್ ಪಕ್ಕದ ಮಳೆನೀರು ಹಿರಿದು ಹೋಗುವ ಮೋರಿ ಇವರಿಗೆ ಕಸದ ತೊಟ್ಟಿ, ಆ ಮೋರಿಗೆ ಎಲ್ಲಾ ಬಗೆಯ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿರುವ ಪರಿಣಾಮ ಮೋರಿಯಲ್ಲಿ ತ್ಯಾಜ್ಯ ಶೇಖರಣೆಗೊಂಡು ಗಬ್ಬೇದ್ದು ನಾರುತ್ತಿದೆ. ಶೌಚಾಲಯ ವಿಲ್ಲದ ಪರಿಣಾಮ ವಾಹನ ಸವಾರರು ಸಹಿತ ಪ್ರಯಾಣಿಕರು ರಸ್ತೆ ಬದಿಯಲ್ಲೇ ಬಯಲು ಶೌಚ ನಡೆಸುತ್ತಿರುವ ದೃಶ್ಯ ಇಲ್ಲಿ ಸರ್ವೇ ಸಾಮಾನ್ಯವಾಗಿದೆ. ಸಿಬ್ಬಂದಿಗಳ ಕೊಠಡಿಯಂತ್ತೂ ಮಳೆಗೆ ರಕ್ಷಣೆ ನೀಡುತ್ತಿಲ್ಲ, ಆ ಕೊಠಡಿಯಲ್ಲೂ ಗೂಡ್ಸ್ ಸಾಮಾಗ್ರಿಗಳನ್ನು ಶೇಖರಣೆ ಮಾಡಿದ್ದರಿಂದ ಸಿಬ್ಬಂದಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಈ ಟೋಲ್ ನಿರ್ವಾಹನಾಧಿಕಾರಿ ರವಿಬಾಬು ಎಂಬವರಲ್ಲಿ ಹೇಳಿದರೆ ನಮ್ಮ ಮಾತಿಗೆ ಮನ್ನಣೆ ನೀಡುತ್ತಿಲ್ಲ, ಮಾದ್ಯಾಮಗಳಿಗೆ ಮಾಹಿತಿ ನೀಡಿದರೆ ನಮ್ಮ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾರೆ ಎನ್ನುತ್ತಾರೆ ಇಲ್ಲಿ ಕರ್ತವ್ಯದಲ್ಲಿದ್ದು ಅಧಿಕಾರಿಗಳ ದರ್ಪಕ್ಕೆ ಕೆಲಸ ಬಿಟ್ಟವರೋರ್ವರು.

Related posts

Leave a Reply