Header Ads
Header Ads
Breaking News

ಸಂವಿಧಾನಬದ್ಧ ಯುವಕರ ತಂಡದಿಂದ ಸಮಾಜ ಪರಿವರ್ತನೆಗೆ ದಾರಿ : ಮುಸ್ತಾಫ.ಕೆ ಅಭಿಪ್ರಾಯ

ಉಳ್ಳಾಲ: ಭಾರತದ ಸಂವಿಧಾನಕ್ಕೆ ಬದ್ಧವಾಗಿರುವಂತಹ ಯುವಜನರ ತಂಡ ಹಮ್ಮಿಕೊಂಡ ಸೌಹಾರ್ದತೆ, ಸಾಮರಸ್ಯದ ಜತೆಗೆ ಹಳ್ಳಿಯ ಸಂಸ್ಕೃತಿಯನ್ನು ನೆನಪಿಸುವಂತಹ ಕಾರ್ಯಕ್ರಮ ಸಾಮಾಜಿಕ ಪರಿವರ್ತನೆಗೆ ಪೂರಕ ಎಂದು ಮುನ್ನೂರು ಗ್ರಾಮದ ಮಾಜಿ ಸದಸ್ಯ ಮುಸ್ತಾಫ.ಕೆ ಅಭಿಪ್ರಾಯಪಟ್ಟರು.

ಮುನ್ನೂರು ಬಟ್ಟೆದಡಿಯ ಸೌಹಾರ್ದ ಕಲಾವಿದರು ಕುತ್ತಾರು, ಶ್ರೀ ಜೈ ಹನುಮಾನ್ ಕ್ರೀಡಾ ಮಂಡಳಿ ಇದರ ಜಂಟಿ ಸಹಯೋಗದಲ್ಲಿ ದೆಪ್ಪೆಲಿಮಾರು ಗದ್ದೆಯಲ್ಲಿ ಭಾನುವಾರ ಹಮ್ಮಿಕೊಂಡ ಮುನ್ನೂರು ಗ್ರಾಮಡೊಂಜಿ ಗೌಜಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ರವೀಂದ್ರನಾಥ ಪೂಂಜ ಮಾಗಣತ್ತಡಿ, ಉಳ್ಳಾಲ ನಗರಸಭೆ ಸದಸ್ಯ ದಿನಕರ್ ಉಳ್ಳಾಲ್, ಮುನ್ನೂರು ಗ್ರಾ.ಪಂ ಸದಸ್ಯ ಗಣೇಶ್ ಟೈಲರ್, ಶೇಖರ್ ಕುಂದರ್, ಬಾಲಕೃಷ್ಣ ಸಾಲಿಯಾನ್ ಕಂಪ, ಎಂ.ಕೆ ಮಹಮ್ಮದ್, ಅಬ್ದುಲ್ ರೆಹಮಾನ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *