Header Ads
Header Ads
Breaking News

ಸಚಿವ ಯು.ಟಿ. ಖಾದರ್ ಜಾತ್ಯಾತೀತ ರಾಜಕಾರಣಿ: ಮಿಥುನ್ ರೈ ಹೇಳಿಕೆ

ಬಿಜೆಪಿಯವರು ಕೇವಲ ಪ್ರಚಾರಕ್ಕೆ ಕಸಾಯಿಖಾನೆ ಅಭಿವೃದ್ಧಿ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಸಚಿವ ಯು.ಟಿ. ಖಾದರ್ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸುವುದು ಬಿಜೆಪಿ ನಾಯಕರಿಗೆ ಶೋಬೆ ತರುವಂತದಲ್ಲ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದರು.
ಅವರು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಭಾರತ ದೇಶ ಜಾನುವಾರು ಮಾಂಸ ರಫ್ತಿನಲ್ಲಿ ನಂಬರ್ ವನ್ ಸ್ಥಾನದಲ್ಲಿದೆ.

ಇದಕ್ಕೆ ಬಿಜೆಪಿ ಸರಕಾರ ಕಾರಣ ಎಂದ ಅವರು, ಸಚಿವ ಯು.ಟಿ. ಖಾದರ್ ಅವರನ್ನು ನಿಂದಿಸುವ ಬಿಜೆಪಿ ನಾಯಕರು ಮೋದಿಯವರನ್ನು ನಿಂದಿಸಲಿ. ಸಚಿವರು ಸ್ವಚ್ಚ ಮಂಗಳೂರು ನಿರ್ಮಾಣದ ನಿಟ್ಟಿನಲ್ಲಿ ಕಸಾಯಿಖಾನೆ ಅಭಿವೃದ್ಧಿ ಸಲಹೆ ನೀಡಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಚಂದ್ರ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply