Header Ads
Header Ads
Breaking News

ಸದನ ಬಹಿಷ್ಕರಿಸಿದವರಿಗೆ ಬಜೆಟ್ ವಿಮರ್ಶಿಸುವ ನೈತಿಕತೆ ಇದೆಯೇ ? : ಪುತ್ತೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಶ್ನೆ

ಪುತ್ತೂರು: ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸದನದಲ್ಲಿ ಕುರಿತು ಚರ್ಚೆ ನಡೆಸದೆ ಜವಾಬ್ದಾರಿ ಮರೆತು ಸದನವನ್ನು ಬಹಿಷ್ಕರಿಸಿದ ಬಿಜೆಪಿ ಮುಖಂಡರಿಗೆ ಬಜೆಟ್ ಕುರಿತು ಮಾತನಾಡುವ ನೈತಿಕತೆ ಇದೆಯೇ ? ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಶ್ನಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ರಾಜ್ಯ ಸಮ್ಮಿಶ್ರ ಸರಕಾರ ಎಲ್ಲಾ ರಂಗಗಳಿಗೂ ಅದರಲ್ಲೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವ ಜನಪ್ರೀಯ ಬಜೆಟ್ ಮಂಡಿಸಿದೆ. ಬಜೆಟ್ ಮಂಡನೆಯ ನಡಾವಳಿಯನ್ನು ಕಡೆಗಣಿಸಿ ಸಭಾತ್ಯಾಗ ಮಾಡಿರುವ ಬಜೆಟ್ ಚರ್ಚೆಯಲ್ಲಿಯೇ ಪಾಲ್ಗೊಳ್ಳದೇ ಇರುವುದು ಸಂವಿಧಾನ ಬಾಹಿರ ಎಂದು ಹೇಳಿದರು.

ರೈಲ್ವೇ ಮೇಲ್ಸೇತುವೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯನ್ನು ರಾಜಕೀಯ ನಾಟಕ ಎಂದು ಹೇಳಿದ ಪುತ್ತೂರು ಶಾಸಕರ ಮಾತನ್ನು ಖಂಡಿಸುವುದಾಗಿ ಹೇಳಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪುತ್ತೂರಿನ ಬಿಜೆಪಿ ನಾಯಕ ರೈಲ್ವೇ ಸಚಿವರಾಗಿದ್ದವರಿಗೆ ಪುತ್ತೂರಿನ ಅಭಿವೃದ್ಧಿ ಕಾಣಿಸಲಿಲ್ಲವೇ ? ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ವಕ್ತಾರ ದುರ್ಗಾಪ್ರಸಾದ್ ರೈ ಕುಂಬ್ರ, ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಹಾಗೂ ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು.

Related posts

Leave a Reply