Header Ads
Header Ads
Header Ads
Header Ads
Header Ads
Header Ads
Breaking News

ಸಮವಸ್ತ್ರ ಧರಿಸದ ಪೊಲೀಸರಿಂದ ದಂಡ ವಸೂಲಿ : ಉಡುಪಿ ನಗರದ ಪಿಪಿಸಿ ಕಾಲೇಜು ಸಮೀಪ ನಡೆದ ಘಟನೆ

ಕೇಂದ್ರ ಸರಕಾರದ ನೂತನ ಮೋಟಾರು ವಾಹನ ಕಾಯಿದೆಯ ದಂಡ ವಸೂಲಿ ವಿರುದ್ಧ ನಾಗರೀಕರು ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಉಡುಪಿಯಲ್ಲೂ ಈ ತರಹದ ಘಟನೆ ನಡೆದಿದ್ದು, ಸಾರ್ವಜನಿಕರು ಈ ಕುರಿತ ವಿಡಿಯೋ ಮಾಡಿ ಹರಿಬಿಟ್ಟಿದ್ದು ಈಗ ವೈರಲ್ ಆಗುತ್ತಿದೆ. ನಗರದ ಪಿಪಿಸಿ ಕಾಲೇಜು ಸಮೀಪ ಈ ಪ್ರಸಂಗ ನಡೆದಿದೆ. ಉಡುಪಿ ನಗರದ ಪಿ.ಪಿ.ಸಿ. ಕಾಲೇಜ್ ಬಳಿ ಸಮವಸ್ತ್ರ ಧರಿಸದ, ಮಫ್ತಿಯಲ್ಲಿರುವ ಪೊಲೀಸನೋರ್ವ ಸಂಜೆ ವೇಳೆ ದ್ವಿಚಕ್ರ ವಾಹನಗಳನ್ನು ತಡೆದು ದಂಡ ವಸೂಲಿಗೆ ಇಳಿದಿದ್ದರು. ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ಇಲ್ಲದ ಈ ಪೊಲೀಸನ ವರ್ತನೆ ಸಂಶಯ ಮೂಡಿಸುವಂತಿತ್ತು. ಕ್ರಮೇಣ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಮತ್ತು ವಿದ್ಯಾರ್ಥಿಗಳು, ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲದೆ ಅಲ್ಲೆ ಸ್ವಲ್ಪ ದೂರದಲ್ಲಿ ಇಲಾಖಾ ಜೀಪಿನಲ್ಲಿದ್ದ ಟ್ರಾಫಿಕ್ ಎಸ್‌ಐ. ಅವರನ್ನು ತಡೆದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ನಡೆಯಿತು. ಇಲಾಖಾ ವಾಹನದಲ್ಲಿದ್ದ ಟ್ರಾಫಿಕ್ ಪೊಲೀಸರು ದೂರದಲ್ಲಿ ವಾಹನದೊಳಗೇ ಕುಳಿತಿದ್ದರು. ಆದರೆ ಸಮವಸ್ತ್ರ ಧರಿಸದ ಪೊಲೀಸನನ್ನು ದಂಡ ವಸೂಲಿಗೆ ಇಳಿಸಲಾಗಿತ್ತು. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು ಈ ಘಟನೆಗೆ ಕಾರಣವಾಯಿತು. ಅಂತೂ ಈ ಕುರಿತ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ, ಮಾತ್ರವಲ್ಲ ಜನರಲ್ಲಿ ದಂಡದ ಕುರಿತು ಇದ್ದ ಆಕ್ರೋಶ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Related posts

Leave a Reply

Your email address will not be published. Required fields are marked *