Header Ads
Breaking News

ಸಮಸ್ಯೆಯ ಆಗರವಾಗಿದೆ ಹೊಸಂಗಡಿಯ ಎಟಿಎಂ ಸೆಂಟರ್

ಮಂಜೇಶ್ವರ ವ್ಯಾಪ್ತಿಯಲ್ಲಿ ಈಗ ಸಾರ್ವಜನಿಕರಿಗೆ ಹೊಸಬಗೆಯ ಸಮಸ್ಯೆಯೊಂದು ಕಾಡುತ್ತಿದೆ. ಮಂಜೇಶ್ವರದಲ್ಲಿರುವ ಎಟಿಎಂಗಳು ಸಮಸ್ಯೆಯ ಆಗರವಾಗಿದೆ. ಇತರ ಬ್ಯಾಂಕ್‌ಗಳಿಗಿಂತ ಅತೀ ಹೆಚ್ಚಿನ ಗ್ರಾಹಕರನ್ನೊಳಗೊಂಡಿರುವ ಎಸ್‌ಬಿಐನ ಎಟಿಎಂ ಕೇಂದ್ರಗಳಲ್ಲಿ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸದೆ ಇರುವುದು ಗ್ರಾಹಕರಲ್ಲಿ ಅಸಮಾಧಾನವನ್ನು ಮೂಡಿಸಿದೆ. ಹೌದು, ಮಂಜೇಶ್ವರದ ಹೃದಯ ಭಾಗದಲ್ಲಿರುವ ಹೊಸಂಗಡಿಯಲ್ಲಿರುವ ಎಸ್‌ಬಿಐನ ಎಟಿಎಂ ಕೇಂದ್ರ ಹವಾನಿಯಂತ್ರಿತ ಕೊಠಡಿಯಾಗಿದ್ದರೂ ಇಲ್ಲಿ ಏರ್ ಕಂಡೀಷನ್ ಸರಿಯಾದ ರೀತಿಯಲ್ಲಿ ಕಾರ್ಯಾಚರಿಸುತ್ತಿಲ್ಲ ಎನ್ನುವ ಆರೋಪ ಗ್ರಾಹಕರಿಂದ ವ್ಯಕ್ತವಾಗುತ್ತಿದೆ. ನಗದು ಪಡೆಯಲು ಒಮ್ಮೆ ಸೆಂಟರ್‌ಗೆ ನುಗ್ಗಿದರೆ ಹೊರಗೆ ಬರುವಾಗ ಸ್ನಾನ ಮಾಡಿದ ರೀತಿಯಲ್ಲಿ ಒದ್ದೆಯಾಗುತ್ತಾರೆ. ಟ್ರಾನ್‌ಸ್ಯಾಕ್ಷನ್ ನಡೆಸಲು ಇಲ್ಲಿ ಕನಿಷ್ಠ ಹತ್ತರಿಂದ ಹನ್ನೆರಡು ನಿಮಿಷಗಳು ತಗಲುತ್ತೆ. ಇನ್ನು ಈ ಬಗ್ಗೆ ಸಮೀಪದಲ್ಲೇ ಇರುವ ಬ್ಯಾಂಕ್ ಅಧಿಕಾರಿಗಳ ಬಳಿ ಪ್ರಶ್ನಿಸಿದರೆ ಅದು ನಮಗೆ ಸಂಬಂಧಪಟ್ಟ ವಿಚಾರವಲ್ಲ ಎಂದು ಗ್ರಾಹಕರನ್ನು ಸಾಗಹಾಕುತ್ತಾರೆ ಎನ್ನುವ ಆರೋಪವೂ ಗ್ರಾಹಕರಿಂದ ವ್ಯಕ್ತವಾಗಿದೆ.

ವಾರದ ಕೆಲವೊಂದು ದಿನಗಳಲ್ಲಿ ಎಟಿಎಂ ಕೇಂದ್ರಗಳಲ್ಲಿ ನಗದು ಕೂಡಾ ಇಲ್ಲದೆ ಹಿಂತಿರುಗಬೇಕಾಗುತ್ತದೆ. ವರ್ಕಾಡಿ, ಮಿಂಜ, ಆನೆಕಲ್ಲು, ಮಂಜೇಶ್ವರ ಮೊದಲಾದೆಡೆಗಳಿಂದ ಆಗಮಿಸುವ ಗ್ರಾಹಕರು ಹೊಸಂಗಡಿಯಲ್ಲಿರುವ ಎಸ್‌ಬಿಐ ಎಟಿಎಂ ಕೇಂದ್ರವನ್ನೇ ಅವಲಂಭಿಸುತ್ತಿದ್ದಾರೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಗ್ರಾಹಕರು ಆಗ್ರಹಿಸಿದ್ದಾರೆ. ಪ್ರತಿಯೊಬ್ಬ ಗ್ರಾಹಕನಿಂದಲೂ ಎಟಿಎಂ ಕಾರ್ಡುಗಳಿಗೆ ಪ್ರತ್ಯೇಕವಾದ ಶುಲ್ಕವನ್ನು ಪಡೆಯುತ್ತಿರುವ ಎಸ್‌ಬಿಐ ಎಟಿಎಂ ಕೇಂದ್ರಗಳಲ್ಲಿ ಗ್ರಾಹಕರಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಬೇಕು ಎನ್ನುವ ಆಗ್ರಹವೂ ಬ್ಯಾಂಕ್‌ನ ಗ್ರಾಹಕರಿಂದ ವ್ಯಕ್ತವಾಗಿದೆ.

Related posts

Leave a Reply

Your email address will not be published. Required fields are marked *