Header Ads
Header Ads
Breaking News

ಸಮಾಜಮುಖಿ ಬದ್ಧತೆಯಿಂದ ಭಿನ್ನ ಸಾಧನೆ : ಎಸ್.ಇ.ಝೆಡ್ ಲಿಮಿಟೆಡ್ ನ ವ್ಯವಸ್ಥಾಪಕ ಡಾ. ರಾಘವೇಂದ್ರ ಹೊಳ್ಳ ಎನ್ ಹೇಳಿಕೆ

ಧರ್ಮ-ಜಾತಿಗಳ ಸಂಕೋಲೆಗಳಿಂದ ವಿಮುಕ್ತವಾಗಿ ಸಮಾನತೆಯ ತತ್ವಕ್ಕನುಗುಣವಾದ ಬದ್ಧತೆಯೊಂದಿಗೆ ಕಾರ್ಯೋನ್ಮುಖರಾದಾಗ ವಿಭಿನ್ನ ಸಾಧನೆ ಸಾಧ್ಯವಾಗುತ್ತದೆಎಂದು ಮಂಗಳೂರು ಎಸ್.ಇ.ಝೆಡ್ ಲಿಮಿಟೆಡ್ ನ ವ್ಯವಸ್ಥಾಪಕಡಾ. ರಾಘವೇಂದ್ರ ಹೊಳ್ಳ ಎನ್ ಹೇಳಿದರು.
ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದಸಮಾಜಕಾರ್ಯ ವಿಭಾಗವು ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿಮಾನವ ಸಂಪನ್ಮೂಲ ಅಭಿವೃದ್ಧಿ ಸಂಘದಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿಅವರು ಮಾತನಾಡಿದರು.

ಸಮಾಜಕಾರ್ಯವು ವ್ಯಕ್ತಿಗಳಕಾರ್ಯಕ್ಷಮತೆಯನ್ನುಅವಲಂಬಿಸಿರುತ್ತದೆ. ವೃತ್ತಿಯಲ್ಲಿ ತೊಡಗಿಸಿಕೊಂಡಿರುವಾಗ ತೃಪ್ತಿಇರಬೇಕು. ಆ ತೃಪ್ತಿಯ ಭಾವವು ವೃತ್ತಿಪರ ಸಾಧನೆಯಭರವಸೆಹೆಚ್ಚಿಸುತ್ತದೆಎಂದರು.ಜನರನ್ನುಅರ್ಥಮಾಡಿಕೊಂಡುಅವರ ಬೇಡಿಕೆಗಳೇನು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

ಸಮಾಜಕಾರ್ಯದಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೊಡುಗೆಗಳನ್ನುನೀಡಬೇಕು.ಧರ್ಮ,ಜಾತಿಇವರೆಡನ್ನೂಹೊರತುಪಡಿಸಿ ಕಾರ್ಯಕ್ಷೇತ್ರಕ್ಕೆ ಹೋದಾಗ ನಮಗೆ ಹೆಚ್ಚಿನ ಮಾಹಿತಿದೊರೆತು ನಮ್ಮವೃತ್ತಿಧ್ಯೇಯಈಡೇರುತ್ತದೆಎಂದುಅವರುಹೇಳಿದರು.ಸಹೋದ್ಯೊಗಿಗಳೊಂದಿಗೆ ಉತ್ತಮ ಭಾಂದವ್ಯ ಹೊಂದುವ ಮೂಲಕ ಸಮಾಜದಲ್ಲಿಅತ್ಯುತ್ತಮ ವ್ಯಕ್ತಿಯಾಗಿ ಹೊರಹೊಮ್ಮಬಹುದು.ಸೈನಿಕ,ಶಿಕ್ಷಕರಿಗೆ ಇರುವ ವೃತ್ತಿಪರ ಮನ್ನಣೆ ಸಮಾಜಕಾರ್ಯ ವಲಯದವರಿಗೂಇದೆ. ಇದನ್ನು ಅರ್ಥೈಸಿಕೊಂಡು ಸಾಮಾಜಿಕಕೊಡುಗೆ ನೀಡಬೇಕುಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಘಕ್ಕೆಆಯ್ಕೆಯಾದ ವಿದ್ಯಾರ್ಥಿಗಳುಡಾ. ರಾಘವೇಂದ್ರ ಹೊಳ್ಳ ಎನ್ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದಡೀನ್‌ಡಾ.ಬಿ. ಗಣಪಯ್ಯ, ಎಂ.ಎಸ್.ಡಬ್ಲ್ಯೂ ವಿಭಾಗದ ಮುಖ್ಯಸ್ಥರಾದ ಪ್ರೊ.ರವಿಶಂಕರ್‌ಕೆ.ಆರ್ ಹಾಗೂ ಸಂಘಕ್ಕೆಆಯ್ಕೆಯಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *