Header Ads
Header Ads
Header Ads
Breaking News

ಸಮಾಜ ವಿದ್ರೋಹಿ ಕೃತ್ಯದಲ್ಲಿ ಭಾಗಿಯಾದ ಸಂಘಟನೆ ನಿಷೇಧಿಸಿ ಹಿಂದೂ ಸಂಘಟನೆ ಯುವಕರ ಹತ್ಯೆಯನ್ನು ಸಿಬಿ‌ಐಗೆ ವಹಿಸಿ ಬಂಟ್ವಾಳದಲ್ಲಿ ಬಿಜೆಪಿ ಯುವಮೋರ್ಚಾದಿಂದ ಪ್ರತಿಭಟನೆ

 

ಸಮಾಜ ವಿದ್ರೋಹಿ ಕ್ರತ್ಯದಲ್ಲಿ ಭಾಗಿಯಾಗಿರುವ ಪಿ‌ಎಫ್‌ಐ, ಎಸ್. ಡಿ.ಪಿ.ಐ ಹಾಗೂ ಕೆ‌ಎಫ್‌ಡಿ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು, ಹಿಂದೂ ಯುವಕರ ಹತ್ಯೆ, ಹಲ್ಲೆ ಪ್ರಕರಣವನ್ನು ಸಿಬಿ‌ಐಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿ ಬಂಟ್ವಾಳ ಕ್ಷೇತ್ರ ಬಿಜೆಪಿ, ಯುವಮೋರ್ಚಾ ಹಾಗೂ ಸಂಘ ಪರಿವಾರ ಸಂಘಟನೆಯ ಆಶ್ರಯದಲ್ಲಿ ಬಂಟ್ವಾಳ ಪುರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಬಿಜೆಪಿ ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ಕಳೆದ ೨ ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣದಲ್ಲಿ ಪಿ‌ಎಫ್‌ಐ, ಎಸ್‌ಡಿಪಿ‌ಐ, ಕೆ‌ಎಫ್‌ಡಿ ಸಂಘಟನೆ ನೇರವಾಗಿ ಭಾಗಿಯಾಗಿರುವುದು ಸಾಭೀತಾಗಿದೆ. ಈ ಸಂಘಟನೆಯು ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು, ಇದರ ಪದಾಧಿಕಾರಿಗಳೇ ಈ ಸಂಘಟನೆಯಲ್ಲೂ ಪದಾಧಿಕಾರಿಯಾಗಿರುವುದು ಕಾನೂನಿಗೆ ಮಾಡಿರುವ ಅಣಕದಂತಿದೆ ಎಂದು ಟೀಕಿಸಿದರು. ಸೆ.೭ ರಂದು ಪ್ರತಿಭಟನಾರ್ಥವಾಗಿ ನಡೆಯಲಿರುವ ಬೈಕ್ ರ್‍ಯಾಲಿಯನ್ನು ಹತ್ತಿಕ್ಕಲು ಮುಂದಾಗಿರುವ ಸರಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

Related posts

Leave a Reply