Header Ads
Breaking News

ಸರಕಾರಿ ಬಸ್‍ಗಳ ನಡುವೆ ಢಿಕ್ಕಿ-ಕೆಲ ಪ್ರಯಾಣಿಕರಿಗೆ ಗಾಯ : ಮುಲ್ಕಿ ಸಮೀಪದ ಹಳೆಯಂಗಡಿಯಲ್ಲಿ ನಡೆದ ಘಟನೆ

ಮುಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯ ಕೆನರಾ ಬ್ಯಾಂಕ್ ಎದುರುಗಡೆ ಸರಕಾರಿ ಬಸ್ಸುಗಳ ನಡುವೆ ಅಪಘಾತ ನಡೆದಿದ್ದು, ಹನ್ನೆರಡು ಜನ ಗಾಯಗೊಂಡ ಘಟನೆ ಬೆಳಿಗ್ಗೆ ನಡೆದಿದೆ. ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಬಳಿ ಮಂಗಳೂರು ಡಿಪೊ ಸರಕಾರಿ ಬಸ್ಸಿನ ಹಿಂಭಾಗಕ್ಕೆ ಉತ್ತರ ಕರ್ನಾಟಕದ ಸರಕಾರಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಂಗಳೂರು ಡಿಪಪೊ ಬಸ್ಸು ಹೆದ್ದಾರಿಯಿಂದ ಚರಂಡಿಗೆ ಸರಿದಿದ್ದು, ಸ್ಥಳೀಯ ರಿಕ್ಷಾ ಚಾಲಕ ಯೋಗೀಶ್ ಎನ್ನುವವರು ತಕ್ಷಣ ಸ್ಥಳಕ್ಕೆ ಆಂಬುಲೆನ್ಸ್ ತರಿಸಿ ಗಾಯಾಳುಗಳು ಅಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಗಾಯಾಳುಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಅಪಘಾತದ ರಭಸಕ್ಕೆ 2 ಬಸ್ಸುಗಳಿಗೆ ಹಾನಿಯಾಗಿದ್ದು, ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೆÇಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related posts

Leave a Reply

Your email address will not be published. Required fields are marked *