Header Ads
Header Ads
Breaking News

ಸರಕಾರಿ ಶಾಲಾ ಪಕ್ಕದಲ್ಲಿ ಅಂಗನವಾಡಿ ನಡೆಸಲು ಅವಕಾಶ ಮಾಡಿಕೊಡಬೇಕು : ರಾಜೇಶ್ ನೈಕ್‌ ಮನವಿ

ಬಂಟ್ವಾಳ: ಸರಕಾರಿ ಶಾಲೆಗಳಲ್ಲಿ ಖಾಲಿ ಕೊಠಡಿಗಳಿದ್ದರೆ ಅಲ್ಲಿ ಶಾಲಾ ಪಕ್ಕದ ಅಂಗನವಾಡಿ ಕೇಂದ್ರಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು. ಅಂಗನವಾಡಿ ಕೇಂದ್ರದ ದುರಸ್ತಿಗೆ ಅನುದಾನ ಇಲ್ಲದಿರುವುದರಿಂದ ಶಾಲೆ ಹಾಗೂ ಅಂಗನವಾಡಿಗಳಿಗೆ ತೊಂದರೆ ಆಗದಂತೆ ಈ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಶಾಸಕ ರಾಜೇಶ್ ನಾೈಕ್ ಹೇಳಿದರು.

ಅವರು ಬಂಟ್ವಾಳ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಯ ಪ್ರಗತಿಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವುದು ಸ್ವಾಗತಾರ್ಹ. ಇದರಿಂದ ಮಕ್ಕಳು ಮಾನಸಿಕವಾಗಿ ಸಿದ್ದರಾಗಿ ಮುಂದಿನ ದಿನಗಳಲ್ಲಿ ಅದೇ ಸರಕಾರಿ ಶಾಲೆಗೆ ಹೋಗಲು ಅನುಕೂಲವೂ ಆಗಲಿದೆ ಎಂದು ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಧ್ವನಿಗೂಡಿಸಿದರು.
ನಾದುರಸ್ತಿ ಸ್ಥಿತಿಯಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಶಾಲೆಗೆ ಸ್ಥಳಾಂತರಿಸಲು ಸರಕಾರದಿಂದ ಆದೇಶ ಬಂದಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿಯಾಗಿ ಈ ವ್ಯವಸ್ಥೆ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು, ಒಟ್ಟಿನಲ್ಲಿ ಮಕ್ಕಳ ಕಲಿಕೆಗೆ ಪೂರಕ ವ್ಯವಸ್ಥೆಯಾಗಬೇಕು ಎಂದು ಶಾಸಕ ರಾಜೇಶ್ ನಾೈಕ್ ತಿಳಿಸಿದರು. ಶಾಲೆ ಪಕ್ಕ ಇರುವ ಅಂಗನವಾಡಿಗಳ ಪಟ್ಟಿ, ಹಾನಿಗೀಡಾಗಿರುವ ಅಂಗನವಾಡಿಗಳ ಪಟ್ಟಿ ಹಾಗೂ ಹೊಸ ಅಂಗನವಾಡಿಗಳ ಪಟ್ಟಿಯನ್ನು ನೀಡುವಂತೆ ಶಿಶು ಅಭಿವೃದ್ದಿ ಅಧಿಕಾರಿಗೆ ಇಓ ರಾಜಣ್ಣ ಸೂಚಿಸಿದರು.

ಭತ್ತದ ಸಾಗುವಳಿ ಮಾಡಲು ಕೃಷಿಕರನ್ನು ಪ್ರೇರೆಪಿಸಬೇಕು, ಕೃಷಿ ಜಮೀನು ಬರಡಾದರೆ ದೇಶದ ಜಿಡಿಪಿಗೂ ತೊಂದರೆ ಆದ್ದರಿಂದ ಇಲಾಖೆ ಹೆಚ್ಚಿನ ಪ್ರೋತ್ಸಾಹವನ್ನು ಭತ್ತದ ಕೃಷಿಕರಿಗೆ ನೀಡಬೇಕು ಎಂದು ಶಾಸಕ ರಾಜೇಶ್ ನಾೈಕ್ ಕೃಷಿ ಅಧಿಕಾರಿಗೆ ಸೂಚಿಸಿದರು. 2860 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಸಾಗುವಳಿ ಮಾಡಲಾಗಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು.

ಸಾಲೆತ್ತೂರಿನಲ್ಲಿ ನಿಧನರಾದ ಮಧುಶ್ರಿ ಎಂಬವರಿಗೆ ಡೆಂಗು ಬಾದಿತವಾಗಿದ್ದರೂ ರೋಗ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು. ಬಳಿಕ ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಯಿಂದ ಮೃತಪಟ್ಟಿರುವುದಾಗಿ ಆರೋಗ್ಯಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾಗಟ್ಟಿ, ತುಂಗಪ್ಪ ಬಂಗೇರಾ, ಮಂಜುಳಾ ಮಾವೆ, ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ಎಂ.ಎಸ್.ಮಹಮ್ಮದ್ ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು. ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ ಬಂಗೇರ, ಇಓ ರಾಜಣ್ಣ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *