Header Ads
Header Ads
Breaking News

ನೆಪಗಳನ್ನು ಹೇಳದೆ ಸಿಎಂ ಕುಮಾರಸ್ವಾಮಿ ತಕ್ಷಣ ರಾಜಿನಾಮೆ ನೀಡಬೇಕು : ಕೋಟ ಶ್ರೀನಿವಾಸ ಪೂಜಾರಿ ಆಗ್ರಹ

 ಸರಕಾರ ಬಹುಮತ ಕಳೆದುಕೊಂಡಿದ್ದು ಖಚಿತವಾಗಿದೆ. ಬಹುಮತ ಇಲ್ಲದ ಪಕ್ಷವನ್ನು ಸದನದಲ್ಲಿ ಬಿಜೆಪಿ ಎದುರಿಸಬೇಕಾಗಿದೆ. ನೆಪಗಳನ್ನು ಹೇಳದೆ ಸಿಎಂ ಕುಮಾರಸ್ವಾಮಿ ತಕ್ಷಣ ರಾಜಿನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್ ವ್ಯಾಪ್ತಿಯನ್ನು ಸ್ಪೀಕರ್ ಪ್ರಶ್ನೆ ಮಾಡಿದ್ದಾರೆ. ಯಡಿಯೂರಪ್ಪ ವಿಶ್ವಾಸಮತ ಸಂದರ್ಭದಲ್ಲಿ ವಿಪಕ್ಷವಾಗಿ ನಡುರಾತ್ರಿ ಕೋರ್ಟ್ ಮೆಟ್ಟಿಲೇರಿದ್ರು. 48 ಗಂಟೆಯಲ್ಲಿ ಸಾಭೀತು ಮಾಡುವ ನಿರ್ದೇಶನ ಪಡೆದಿದ್ರು.ಅಂದು ನೀವು ಸುಪ್ರೀಂ ಆದೇಶ ಪಾಲನೆ ಮಾಡಿಲ್ವ ಈಗ್ಯಾಕೆ ಸುಪ್ರೀಂ ಮದ್ಯ ಪ್ರವೇಶಕ್ಕೆ ಆಕ್ಷೇಪ ವ್ಯಕ್ತ ಮಾಡ್ತೀರಿ?ಸರಕಾರ ಶಾಸಕರ ಮೇಲೆ ಎಸಿಬಿ ಪ್ರಯೋಗ ಮಾಡಿ ಒತ್ತಡ ಹೇರಲು ಪ್ರಯತ್ನ ಮಾಡುತ್ತಿದೆ. ಎಸಿಬಿ ಮುಖ್ಯಸ್ಥನಾಗಿ ನಿಂಬಾಳ್ಕರ್ ಇದ್ದಾರೆ.ರಾಜಿನಾಮೆ ಕೊಟ್ಟ ಶಾಸಕರನ್ನು ಬಗ್ಗುಬಡಿಯಲು ಎಸಿಬಿ ಬಳಸುವ ಆತಂಕ ಇದೆ.ರಾಜ್ಯದಲ್ಲಿ ಉಂಡೂ ಹೋದ ಕೊಂಡೂ ಹೋದ ಸರ್ಕಾರ. ರೇವಣ್ಣ ಹಸ್ತಕ್ಷೇಪ ಮಾಡಿ ಸಾವಿರಾರು ಕೋಟಿ ದಂಧೆ ಮಾಡಿದ್ದಾರೆ. ಸ್ವತ ಶಾಸಕ ಮುನಿರತ್ನ ಆರೋಪಿಸುತ್ತಿದ್ದಾರೆ. ಲೊಕೋಪಯೋಗಿ ಮಂತ್ರಿ 800 ಇಂಜಿನಿಯರ್ ಗಳ ವರ್ಗಾವಣೆ ಮಾಡಿದ್ದಾರೆ. ಬಹುಮತ ಕಳೆದುಕೊಂಡ ಸರ್ಕಾರದ ಮಂತ್ರಿಯಿಂದ ಅಕ್ರಮವಾಗಿದೆ. ರೇವಣ್ಣ ನೂರಾರು ಕೋಟಿ ಕಮಿಷನ್ ಹೊಡೆದ ಸಂಶಯ ಇದೆ.ಪೊಲೀಸ್ ಇಲಾಖೆಯ ವರ್ಗಾವಣೆ ತಡೆಹಿಡಿಯಲಾಗಿದೆ. ಇಂಜಿನಿಯರ್ ಗಳ ವರ್ಗಾವಣೆಯನ್ನೂ ತಕ್ಷಣ ತಡೆಹಿಡಿಬೇಕು.ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಗೆ ಕೋಟ ಒತ್ತಾಯ ಮಾಡಿದರು.ಡಿಕೆಶಿ ಎಷ್ಟೇ ಒತ್ತಡ ತಂದ್ರೂ ಎಂಟಿಬಿ ಬದಲಾಗೋಲ್ಲ ಅನ್ನೋ ವಿಶ್ವಾಸ ಇದೆ. ಅಂತವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದರು.ಸಿದ್ದರಾಮಯ್ಯಗೆ ವಿರೋಧ ಪಕ್ಷ ನಾಯಕನಾಗೊದೇ ಉತ್ತಮ ಅಂತನಿಸಿದೆ.ಕಾಂಗ್ರೇಸ್ ಉಳಿಯಲು ಜೆಡಿಎಸ್ ಗೆ ನೀಡಿದ ಬೆಂಬಲ ವಾಪಾಸು ಪಡೆಯಲೇಬೇಕು.ಬುಧವಾರ ವಿಶ್ವಾಸಮತ ಸಾಭೀತು ಅಸಾಧ್ಯ.ರಾಜ್ಯ ಸರಕಾರ ಬೀಳುವುದು ಖಚಿತ ಅಂತ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

 

Related posts

Leave a Reply

Your email address will not be published. Required fields are marked *