Header Ads
Breaking News

ಸರಿಯಾದ ವ್ಯವಸ್ಥೆ ಇಲ್ಲದೇ ನಿಷ್ಟ್ರಯೋಜಕವಾಗಿರುವ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ಶೌಚಾಲಯ

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿರುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿರುವ ಶೌಚಲಯ ನಿಷ್ಟ್ರಯೋಜಕವಾಗಿದೆ. ಶೌಚಾಲಯಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಇದರಿಂದ ಅಲ್ಲಿನ ಸಿಬ್ಬಂದಿಗಳಿಗೆ ತೊಂದರೆ ಅನುಭವಿಸಬೇಕಾಗಿದೆ. ಇದರ ಜೊತೆಗೆ ಪಂಪ್ ಹೌಸ್‍ನ ಗೇಟ್‍ವಾಲ್‍ಗಳಿಗೆ ಚೇಂಬರ್ ನಿರ್ಮಿಸಲಾಗಿದ್ದು ಒಳಭಾಗದಲ್ಲಿ ಸೋರಿಕೆಯಾಗುವ ನೀರೆಲ್ಲಾ ಈ ಚೇಂಬರ್ ಮೂಲಕ ಹೊರ ಹೋಗುತ್ತದೆ. ಆದರೆ ಹೊರ ಭಾಗದಲ್ಲಿರುವ ಛೇಂಬರ್‍ನಲ್ಲಿ ಮಳೆ ನೀರು ತುಂಬಿಕೊಂಡು ಒಳಭಾಗದ ನೀರು ಹೊರ ಹೋಗುವ ಬದಲು ಮತ್ತೆ ಒಳಭಾಗದಲ್ಲಿಯೇ ಸಂಗ್ರಹಗೊಳ್ಳುತ್ತಿದೆ. ಇದರಿಂದ ಪಂಪ್‍ಹೌಸ್‍ನ ಒಳಭಾಗದಲ್ಲಿ ಅರ್ಥಿಂಗ್ ಸಮಸ್ಯೆ ಉಂಟಾಗಿ ಪಂಪ್‍ಗಳಲ್ಲೆಲ್ಲಾ ವಿದ್ಯುತ್ ಸಂಚರಿಸಿ ಶಾಕ್ ಹೊಡೆಯುತ್ತದೆ. ಇದರಿಂದಾಗಿ ಇಲ್ಲಿನ ಸಿಬ್ಬಂದಿಗಳು ಆತಂಕದಿಂದ ಕೆಲಸ ಮಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ತುಂಬಿಕೊಂಡರೆ ಲಕ್ಷಾಂತರ ರೂಪಾಯಿ ಮೌಲ್ಯದ ಪಂಪ್ ಮತ್ತಿತರ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿ ಹಾನಿಗೀಡಾಗಲಿದೆ.

Related posts

Leave a Reply

Your email address will not be published. Required fields are marked *