Header Ads
Breaking News

ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಆಗ್ರಹಿಸಿ ಬಂದ್ ಹೋರಾಟಕ್ಕೆ ನಾವು ಕೂಡಾ ಬೆಂಬಲ ಕೊಟ್ಟಿದ್ದೇವೆ : ಯುಟಿ ಖಾದರ್ ಹೇಳಿಕೆ

ಸರೋಜಿನಿ ಮಹಿಷಿ ವರದಿಗೆ ಜಾರಿಗಾಗಿ ಆಗ್ರಹಿಸಿ ಇಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ನಾವು ಕೂಡ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದೇವೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.ಅವರು ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾಗಿದೆ. ಯಾವುದನ್ನು ಅನುಷ್ಠಾನ ಮಾಡಕ್ಕಾಗಲ್ಲ ಎಂದು ಹೇಳಿಲಿ. ರಾಜ್ಯದ ಯುವಕ, ಯುವತಿಯರಿಗೆ ಉದ್ಯೋಗ ಸಿಗಬೇಕಲ್ಲವೇ?ರಾಜ್ಯ ಸರ್ಕಾರ ಕೂಡಲೇ ಚರ್ಚೆ ನಡೆಸಲಿ, ಕನ್ನಡಪರ ಸಂಘಟನೆಗಳ ಬೇಡಿಕೆ ಈಡೇರಿಸಬೇಕು ಎಂದು ಶಾಸಕ ಖಾದರ್ ಹೇಳಿದರು.

Related posts

Leave a Reply

Your email address will not be published. Required fields are marked *