Header Ads
Header Ads
Header Ads
Breaking News

ಸರ್ಕಾರಿ ಶಾಲೆಯ ಬಗ್ಗೆ ಕೀಳರಿಮೆ ಬೇಡ ಉನ್ನತ ಹುದ್ದೆಯಲ್ಲಿದ್ದಾರೆ ಕನ್ನಡ ಮಾಧ್ಯಮದಲ್ಲಿ ಕಲಿತವರು ಮುಲ್ಕಿಯಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಅಭಿಪ್ರಾಯ

 

ಸರಕಾರಿ ಶಾಲೆ ಎಂಬ ಕೀಳರಿಮೆ ಬೇಡ ಇಂದು ದೇಶದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದವರಲ್ಲಿ ಹೆಚ್ಚಿನವರು ಕನ್ನಡ ಮಾದ್ಯಮದಲ್ಲಿ ಕಲಿತವರು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಮೂಲ್ಕಿ ಪಂಜಿನಡ್ಕ ಕೆ.ಪಿ.ಎಸ್.ಕೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿ ಪ್ರತಿಭಾ ಸುಂದರ್‌ರಾಜ್ ಕೊಡಮಾಡಿರುವ ಸುಮಾರು ೧.೨೦ ಲಕ್ಷ ಮೌಲ್ಯದ ಸಮವಸ್ತ್ರ ಹಾಗೂ ಶೈಕ್ಷಣಿಕ ಸಲಕರಣೆ ಮತ್ತು ಇಸ್ಕಾನ್ ವತಿಯಿಂದ ಶೂ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಅವರ ಸಾಧನೆಯನ್ನು ಮಾಗದರ್ಶಿಯಾಗಿರಿಸಿ ಸಾಧನೆ ಮಾಡುವ ಮೂಲಕ ಉನ್ನತಿಗಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆನ್ನು ತುಳು ಸಾಹಿತ್ಯ ಅಕಾಡಮಿ ಮಾಜಿ೮ ಅಧ್ಯಕ್ಷ ಉಮಾನಾಥ ಕೋಟ್ಯಾನ್ ವಹಿಸಿದ್ದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ದಾನಿ ಸತೀಶ್ ಶೆಟ್ಟಿ, ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಂಗನಾಥ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ ಶೆಟ್ಟಿ,ಕೆ.ಪಿ.ಎಸ್.ಕೆ ಶಾಲೆಯ ಟ್ರಸ್ಟಿಗಳಾದ ಸುರೇಂದ್ರ ಕಾಮತ್ ಮತ್ತು ವಿಮಲಾ ಕಾಮತ್,ಶಾಲಾ ಸಂಚಾಲಕ ಗಂಗಾಧರ ಶೆಟ್ಟಿ ಬರ್ಕೆತೋಟ, ನಿವೃತ್ತ ಮುಖ್ಯೋಪಾದ್ಯಾಯ ಅಚ್ಚುತ ಆಚಾರ್ಯ, ಪ್ರೌಢ ಶಾಲಾ ಮುಖ್ಯೋಪಾದ್ಯಾಯ ನಾಗಭೂಷಣ ರಾವ್,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಅಂಬರೀಶ ಲಮಾಣಿ ಟ್ರಸ್ಟಿ ಸುರೇಂದ್ರ ಕಾಮತ್, ಶಿಕ್ಷಕ ನೋಣಯ್ಯ ರೆಂಜಾಳ, ಅಂಬರೀಶ ಲಮಾಣಿ ಮತ್ತಿತರರು ಇದ್ದರು.
ವರದಿ: ನಿಶಾಂತ್ ಮುಲ್ಕಿ

Related posts

Leave a Reply