Header Ads
Breaking News

ಸರ್ಫಿಂಗ್ ಸ್ವಾಮಿಗೆ ಶ್ರದ್ಧಾಂಜಲಿ

ಮಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಸರ್ಫಿಂಗ್‌ನಲ್ಲಿ ಪರಿಣಿತರಾದ ಸರ್ಫಿಂಗ್ ಸ್ವಾಮಿ ಅವರು ಇತೀಚೆಗೆ ನಿಧನರಾಗಿದ್ದು, ಅವರಿಗೆ ನುಡಿನಮನ ಸಲ್ಲಿಸುವ ಕಾರ್ಯಕ್ರಮವು ಮುಲ್ಕಿಯ ಮಂತ್ರ ಸರ್ಫ್ ಕ್ಲಬ್‌ನಲ್ಲಿ ನಡೆಯಿತು.

ಸ್ವಾಮಿ ನರಸಿಂಗ ಅವರು 2004ರಲ್ಲಿ ಕರಾವಳಿಯ ಮುಲ್ಕಿಯಲ್ಲಿನ ಮಂತ್ರ ಸರ್ಫ್ ಕ್ಲಬ್‌ನ ಸ್ಥಾಪಕರಾಗಿದ್ದರು. ಈ ಕ್ಲಬ್‌ನ ಮೂಲಕ ಅವರು ಪ್ರಪಂಚದ ಅನೇಕ ಯುವಕರಿಗೆ ಸರ್ಫಿಂಗ್‌ನಲ್ಲಿ ತರಬೇತಿಯನ್ನು ನೀಡಿದ್ದಾರೆ. ಸ್ವಾಮಿಯವರು ನಾಥ್‌ರ್ ಫ್ಲೋರಿಡಾದ ಮೊದಲ ಸರ್ಫ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿದ್ದರು. ಅಮೆರಿಕದ ಈಸ್ಟ್ ಕೋಸ್ಟ್‌ನ ಸರ್ಫಿಂಗ್ ನಲ್ಲಿ ಪರಿಣಿತರಲ್ಲಿ ಒಬ್ಬರಾಗಿದ್ದರು. ದೇಶದಲ್ಲಿ ಸರ್ಫಿಂಗ್ ಅನ್ನು ಮಾನ್ಯತೆ ಪಡೆದ ಕ್ರೀಡೆಯನ್ನಾಗಿಸುವ ಗುರಿಯೊಂದಿಗೆ ತಮ್ಮ ವಿದ್ಯಾರ್ಥಿಗಳೊಂದಿಗೆ ಸೇರಿ ಭಾರತದಲ್ಲಿ ಸರ್ಫಿಂಗ್ ಆಂದೋಲನದ ವಿವಿಧ ಆಯಾಮಗಳಲ್ಲಿ ಸ್ವಾಮಿ ಪರಿಣಿತಿ ಪಡೆದಿದ್ದರು.

ಸರ್ಫಿಂಗ್ ಸ್ವಾಮಿ ಅವರಿಗೆ ಶ್ರದ್ದಾಂಜಲಿ ಮತ್ತು ನುಡಿನಮನ ಸಲ್ಲಿಸುವ ಕಾರ್ಯಕ್ರಮವು ನಡೆಯಿತು. ಸ್ವಾಮಿ ವಿಷ್ಣು ಮಹರಾಜ್ ಅವರು ದಿವಂಗತ ಸ್ವಾಮಿ ನರಸಿಂಗ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು ಬಳಿಕ ಮಾತನಾಡಿದ ಅವರು, ಸರ್ಫಿಂಗ್ ಸ್ವಾಮಿ ಅವರು ಎಲ್ಲರಿಗೂ ಆದ್ಯಾತ್ಮ ಗುರುವಾಗಿ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಅನೇಕರಿಗೆ ಅವರು ಸ್ನೇಹಿತನಾಗಿ, ಗುರುವಾಗಿ ಮತ್ತು ಶಿಕ್ಷಕರಾಗಿ ಇದ್ದರು ಎಂದು ಹೇಳಿದರು.

ಆನಂತರ ಮೂಲ್ಕಿ-ಮೂಡುಬಿದರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಮಾತನಾಡಿ, ಸರ್ಫಿಂಗ್ ಸ್ವಾಮಿ ಅವರು ನಮ್ಮೊಂದಿ ಇಲ್ಲದಿದ್ದರೂ ಸಹ ಅವರು ಬಿಟ್ಟು ಹೋದ ಸಂದೇಶಗಳು ಮತ್ತು ಸಾಧನೆ ನಮಗೆಲ್ಲರಿಗೂ ಅವಿಸ್ಮರಣೀಯ. ಈ ಭಾಗದ ಮತ್ತು ದೇಶದ ಜನರ ಪ್ರೀತಿಗೆ ಪಾತ್ರರಾದ ಸಫಿಂಗ್ ಗುರೂಜಿಯವರಿಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭ ಸ್ವಾಮಿ ಗಿರಿ ಮಹಾರಾಜ್, ಪ್ರೇಮ್ ಕಿಶೋರ್ ಪ್ರುಭು, ಸ್ವಾಮಿ ಯತಿ ಮಹಾರಾಜ್, ಕಿಶೋರ್ ಕುಮಾರ್, ಕಿರಣ್ ಕುಮಾರ್, ಧನಂಜಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *