Header Ads
Header Ads
Breaking News

ಸಸಿಹಿತ್ಲು : ನಿಷೇಧವಿದ್ದರೂ ಈಜಲು ತೆರಳಿದ ನಾಲ್ವರಲ್ಲಿ ಇಬ್ಬರು ಸಮುದ್ರಪಾಲು

ನಿಷೇಧವಿದ್ದರೂ ಈಜಲು ತೆರಳಿದ್ದ ನಾಲ್ವರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಮಂಗಳೂರು ಸಮೀಪದ ಸಸಿಹಿತ್ಲುವಿನಲ್ಲಿ ನಡೆದಿದೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕಾವೂರಿನ ಗುರುಪ್ರಸಾದ್ (28) ಹಾಗೂ ಬಜ್ಪೆ ಗ್ರಾಮದ ನಿವಾಸಿ ಸುಜಿತ್ (32) ನೀರು ಪಾಲಾಗಿದ್ದಾರೆ. ಇವರೊಡನೆ ಈಜಲು ತೆರಳಿದ್ದ ಇನ್ನಿಬ್ಬರು ಯುವಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸುಚಿತ್ ಎಂಬಾತ ಮಂಗಳೂರಿನಲ್ಲಿ ಐಟಿಐ ವಿದ್ಯಾರ್ಥಿಯಾಗಿದ್ದರೆ, ಗುರುಪ್ರಸಾದ್ ಕಾವೂರಿನ ನಿವಾಸಿಯಾಗಿದ್ದಾನೆ. ಬಜ್ಪೆ ಮೂಲದ ಸೃಜನ್ ಹಾಗೂ ಕಾಂರ್ತಿಕ್ ಎಂಬುವವರನ್ನು ರಕ್ಷಣೆ ಮಾಡಲಾಗಿದ್ದು ಇದರಲ್ಲಿ ಸೃಜನ್ ತೀವ್ರ ಅಸ್ವಸ್ಥರಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಸಹಿತ್ಲುವಿನ ಅಗ್ಗದ ಕಳಿಯ ಎಂಬಲ್ಲಿ ಭಾನುವಾರ ಕೆಸರುಗದ್ದೆ ಕ್ರೀಡೋತ್ಸವ ಇದ್ದ ಕಾರಣ ಅದರಲ್ಲಿ ಭಾಗವಹಿಸಲು ಈ ಯುವಕರು ಆಗಮಿಸಿದ್ದರು. ಹಗ್ಗಜಗ್ಗಾಟ ಸ್ಪರ್ಧೆಗೆ ಬಜಪೆ ಯುವ ಟೈಗರ್ ತಂಡದ 7ಮಂದಿ ಆಗಮಿಸಿದ್ದು ಮೊದಲ ಸುತಿನಲ್ಲೇ ಸೋಲನುಭವಿಸಿದ್ದ ಯುವಕರು ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಸ್ಥಳೀಯರು ಹಲವು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದರೂ ಗಮನಿಸದೆ ಸಮುದ್ರಕ್ಕಿಳಿದು ಅಪಾಯಕ್ಕೆ ಸಿಕ್ಕಿದ್ದಾರೆ.

Related posts

Leave a Reply

Your email address will not be published. Required fields are marked *