Header Ads
Header Ads
Breaking News

ಮಜಿಬೈಲ್‌ನಲ್ಲಿ ನಡೆದ ಸಹಕಾರಿ ಸಪ್ತಾಹ ಕಾರ್ಯಕ್ರಮ

ಮಂಜೇಶ್ವರ : ಸಹಕಾರಿ ಸಂಘ ಬ್ಯಾಂಕ್‌ಗಳು ಕ್ರಿಯಾತ್ಮಕವಾಗಿ ಇನ್ನಷ್ಟು ಜನರ ಹತ್ತಿರ ಸಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳು ಜನರ ಹೃದಯದಲ್ಲಿ ಸ್ಥಾನ ಭದ್ರ ಗೊಳಿಸಬೇಕೆಂದು ಸಹಕಾರಿ ಸಂಘಗಳ ಜೋಯಿಂಟ್ ರಿಜಿಸ್ಟ್ರಾರ್ ವಿ ಮೊಹಮ್ಮದ್ ನೌಶಾದ್ ಅವರು ಹೇಳಿದರು.

ಅವರು ಮಜಿಬೈಲ್ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಜರಗಿದ ಸಹಕಾರಿ ಸಪ್ತಾಹದ ಸೆಮಿನಾರ್ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸಹಕಾರಿ ಸಂಘಗಳಲ್ಲಿ ಸ್ವಯಂ ಸ್ಪೂರ್ತಿಯಿಂದ ತೊಡಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಮಿಂಚಬೇಕಾದ ಕಾಲ ಸನ್ನಿಹಿತವಾಗಿದೆ ಎಂಬುದಾಗಿ ಅವರು ಹೇಳಿದರು. ಬ್ಯಾಂಕಿನ ಉಪಾಧ್ಯಕ್ಷ ಮಮ್ಮುಂಞಿ ಹಾಜಿ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಕೆ. ಮುರಳೀಧರ, ಜಯಚಂದ್ರ, ಬಿ ವಿ ರಾಜನ್, ದಿವಾಕರ, ಸಂಜೀವ ಶೆಟ್ಟಿ, ಸುನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *