Header Ads
Breaking News

ಸಹಕಾರಿ ಬ್ಯಾಂಕ್‍ಗಳಿಂದ ಜನರಿಗೆ ತುಂಬಾ ಅನುಕೂಲವಾಗುತ್ತಿದೆ : ಉಮಾನಾಥ ಕೋಟ್ಯಾನ್ ಹೇಳಿಕೆ

ಸಹಕಾರಿ ಬ್ಯಾಂಕ್‍ಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ಅನುಕೂಲವಾಗುತ್ತಿದೆ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಏಳಿಂಜೆಯಲ್ಲಿ ಏಳಿಂಜೆ ಸೌಹಾರ್ದ ಸಹಕಾರಿ ನಿಯಮಿತ ಇದರ ಉದ್ಘಟನೆಯನ್ನು ನೆರವೇರಿಸಿ ಮಾತನಾಡಿದರು. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯಕ್ಕೆ ಕೆಲವು ಕಾನೂನು ತೊಡಕು ಇರುವುದರಿಂದ ಸಹಕಾರಿ ಬ್ಯಾಂಕ್‍ಗಳಲ್ಲಿ ಇಂತಹ ತೊಡಕು ಇರುವುದಿಲ್ಲ.

ಇದರಿಂದ ಜನರಿಗೆ ತುಂಭಾ ಅನುಕೂಲವಾಗಲಿದೆ, ಬ್ಯಾಂಕ್ ಮತ್ತು ಗ್ರಾಹಕರ ಮಧ್ಯೆ ಉತ್ತಮ ಬಾಂಧವ್ಯ ಮತ್ತು ವಿಶ್ವಾಸ ಇದ್ದರೆ ಇಂತಹ ಸಂಸ್ಥೆ ಬೆಳೆಯಲು ಸಹಕಾರಿಯಾಗಲಿದೆ ಎಂದರು. ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ ಮಾತನಾಡಿ ಉತ್ತಮ ವ್ಯವಹಾರದಿಂದ ಯಾವುದೇ ಹಣಕಾಸು ಸಂಸ್ಥೆಗಳು ಬೆಳೆಯಲು ಸಾಧ್ಯ, ಸಹಕಾರಿ ಸಂಸ್ಥೆಗಳು ಅನೇಕ ಕಡೆ ಗ್ರಾಮೀಣ ಪ್ರದೇಶದಲ್ಲಿ ಆ ಪ್ರದೇಶದ ಜನರಿಗೆ ವರದಾನವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಪ್ರವರ್ತಕ ವೈ ಯೋಗೀಶ್ ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು, ಈ ಸಂದರ್ಭ ಕಿರೆಂ ಚರ್ಚ್ ಧರ್ಮಗುರು ವಿಕ್ಟರ್ ಡಿಮೆಲ್ಲೋ, ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು , ತಾಲೂಕು ಪಂಚಾಯತ್ ಸದಸ್ಯೆ ರಶ್ಮೀ ಆಚಾರ್ಯ, ಐಕಳ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಕ್ಯಾಂಪೆÇ್ಕೀನ ಅಧ್ಯಕ್ಷ ಎಸ್.ಆರ್. ಸತೀಶ್ ಚಂದ್ರ, ಸದಾನಂದ ಶೆಟ್ಟಿ ಭಂಡಸಾಲೆ, ಗುತ್ತಿಗೆದಾರ ಸಂತೋಷ್ ಹೆಗ್ಡೆ, ರಘರಾಮ ಅಡ್ಯಂತ್ತಾಯ, ಪ್ರಕಾಶ್ ಶೆಟ್ಟಿ ನಂದನ ಮನೆ, ಶ್ರೀಮತಿ ಉಷಾ ಶೆಟ್ಟಿ, ಕೆ.ಭುವನಾಭಿರಾಮ ಉಡುಪ, ಶಶಿಧರ ಶೆಟ್ಟಿ ಕೆರಮ, ಬ್ಯಾಂಕ್ ನಿರ್ದೇಶಕರಾದ ಶಶಿಧರ್ ಅಡ್ಕತ್ತಾಯ, ವೈ.ವಿ ಗಣೇಶ್ ಭಟ್, ಪ್ಲಾವಿಯಾ ಡಿಸೋಜ, ಕೌಶಲ್ಯ ಶೆಟ್ಟಿ, ಮ್ಯಾಕ್ಸಿಂ ಪಿಂಟೋ, ವಲೇರಿಯನ್ ಡಿಕೋಸ್ತ, ಬಾಸ್ಕರ ಶೆಟ್ಟಿ, ರಾಮದಾಸ್ ಶಣೈ, ರಮೇಶ್ ಪೂಜಾರಿ, ಜಯ, ಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *