Header Ads
Breaking News

ಸಾಧನೆಗಳ ಸರದಾರ ದಿ. ಲೋಕನಾಥ್ ಬೋಳಾರ್

ಸಾಧನೆಗಳ ಸರದಾದ ಲೋಕನಾಥ್ ಬೋಳಾರ್ ಅವರು, ಕ್ರೀಡಾ ಸಾಧನೆಯನ್ನು ಮೈಗೂಡಿಸಿಕೊಂಡು ಸೇವಾ ನಿವೃತ್ತಿಯ ಬಳಿಕ ಮತ್ಸ್ಯೋಧ್ಯಮದಲ್ಲಿ ಹೊಸ ಭಾಷ್ಯವನ್ನು ಬರೆಯುತ್ತಾ ಹೋದವರು. ದೇಶವಿದೇಶ ಸುತ್ತಿ ಆಧುನಿಕ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ಮತ್ಸ್ಯೋಧ್ಯಮಿಗಳಿಗೆ ಮಾರ್ಗದರ್ಶಕರಾದವರು. ಇದೀಗ ಅವರ ಸ್ಮರಣಾರ್ಥ ಸ್ಮರಣಾರ್ಥವಾಗಿ ಮಂಗಳೂರು ಯಾಂತ್ರೀಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಸೌತ್ ವಾರ್ಫ್ ಬಂದರ್ ಇದರ ಸದಸ್ಯರ ವತಿಯಿಂದ ಫೌಲರ್ ಕಾಟ್ ವಿತರಣಾ ಕಾರ್ಯಕ್ರಮ ನಡೆಯಿತು.

ಸಾಧನೆಗಳ ಸರದಾರ ಲೋಕನಾಥ್ ಬೋಳಾರ್ ಅವರು, 1971ರಲ್ಲಿ ದಕ್ಷಿಣ ರೈಲ್ವೇ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದರು. ಉತ್ತಮ ದೇಹದಾಢ್ರ್ಯ ಹೊಂದಿದ್ದು, ಪವರ್ ಲಿಫ್ಟರ್ ಆಗಿ ಮಿಂಚಿದವರು. ಹೈಸ್ಕೂಲ್‍ನಲ್ಲಿರುವಾಗಲೇ ರಾಜ್ಯ ಮಟ್ಟದ ಶಾಟ್‍ಪುಟ್ ಮತ್ತು ಡಿಸ್ಕಸ್ ತ್ರೋನಲ್ಲಿ ಚಿನ್ನದ ಪದಕ ಗೆದ್ದವರು. 1970ರಲ್ಲಿ ಕಟಕ್‍ನಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಚಾಂಪಿಯನ್ ಶಿಪ್‍ನಲ್ಲಿ ಮೈಸೂರ್ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಶಾಟ್ಪುಟ್ ಮತ್ತು ಡಿಸ್ಕಸ್ ತ್ರೋನಲ್ಲಿ ಚಿನ್ನ ಪಡೆದವರು. 1975ರಲ್ಲಿ ಇರಾನಿನ ಟೆಹರಾನ್‍ನಲ್ಲಿ ನಡೆದ ಇನ್ವಿಟೇಶನ್ ಮೀಟ್‍ನಲ್ಲಿ ಭಾರತವನ್ನು ಪ್ರತಿನಿಧಿಸಿ ಡಿಸ್ಕಸ್‍ನಲ್ಲಿ ಬೆಳ್ಳಿಯ ಪದಕ, 1986ರಲ್ಲಿ ಹೈದರಾಬಾದ್‍ನಲ್ಲಿ ನಡೆದ ಅಂತರ್ ರಾಜ್ಯ ಅತ್ಲೆಟಿಕ್ ಚಾಂಪಿಯನ್ ಶಿಪ್‍ನ ಡಿಸ್ಕಸ್ ತ್ರೋನಲ್ಲಿ ಚಿನ್ನದ ಪದಕ, 1990ರಲ್ಲಿ ಮದ್ರಾಸ್‍ನಲ್ಲಿ ನಡೆದ ಆಲ್ ಇಂಡಿಯಾ ಓಪನ್ ಅತ್ಲೆಟಿಕ್ ಮೀಟ್‍ನ ಶಾಟ್‍ಪುಟ್‍ನಲ್ಲಿ ಬೆಳ್ಳಿಯ ಪದಕ ಗಿಟ್ಟಿಸಿಕೊಂಡವರು.

ಸತತ 6 ವರ್ಷ ರಾಷ್ಟ್ರ ಮಟ್ಟದ ಪವರ್ ಲಿಫ್ಟ್‍ನಲ್ಲಿ ಚಿನ್ನದ ಪದಕ, 5 ಬಾರಿ ಭಾರತವನ್ನು ಪ್ರತಿನಿಧಿಸಿ, 3 ಬಾರಿ ಬಾರತದ ಪವರ್ ಲಿಫ್ಟ್ ಟೀಮ್‍ನಲ್ಲಿ ಕ್ಯಾಪ್ಟನ್ ಆಗಿ ಅಮೆರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್‍ನಲ್ಲಿ 2 ಬಾರಿ ಪ್ರತಿನಿಧಿಸಿದವರು. ಸೋಲಿಲ್ಲದ 18 ವರ್ಷಗಳ ಕರ್ನಾಟಕ ಚಾಂಪಿಯನ್ ಶಿಪ್, ಭಾರತದ 2 ವರ್ಷಗಳ ಅತ್ಲೆಟಿಕ್ ಟೀಮ್‍ನ ಕ್ಯಾಪ್ಟನ್ ಬಿ. ಸಿಂಗ ಗುಜರನ್ ಭವಾನಿ ತಿಂಗಳಾಯ ಸುಪುತ್ರ ಲೋಕನಾಥರಿಗೆ ಒಲಿದಿದ್ದು, 1978ರಲ್ಲಿ ಮೈಸೂರಿನಲ್ಲಿ ದಸರಾ ಪ್ರಶಸ್ತಿ ಹಾಗೂ 1980ರಲ್ಲಿ ಪ್ರತಿಷ್ಟಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಈ ಕ್ರೀಡಾ ಸಾಧನೆಯನ್ನು ಮೈಗೂಡಿಸಿಕೊಂಡು ಲೋಕನಾಥ್ ಬೋಳಾರ್ ಸೇವಾ ನಿವೃತ್ತಿಯ ಬಳಿಕ ಮತ್ಸ್ಯೋಧ್ಯಮದಲ್ಲಿ ಹೊಸ ಭಾಷ್ಯವನ್ನು ಬರೆಯುತ್ತಾ, ಹೋದವರು. ದೇಶವಿದೇಶ ಸುತ್ತಿ ಆಧುನಿಕ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ಮತ್ಸ್ಯೋಧ್ಯಮಿಗಳಿಗೆ ಮಾರ್ಗದರ್ಶಕರಾದವರು. ಅವರ ಸಾಧನೆಗಳನ್ನು ಅನುಲಕ್ಷಿಸಿ ಕರ್ನಾಟಕ ಸರಕಾರ 2016ರ ಕರ್ನಾಟಕ ರಾಜ್ಯ ಯುವ ಸಬಲೀಕರಣ ಕ್ರೀಡಾ ಪ್ರಶಸ್ತಿ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ ಗೌರವಿಸಿದೆ. ವಿಜಿ ಪಾಲ್ ಅವರು ಸ್ವರ್ಗಿಯ ಲೋಕನಾಥ್ ಬೋಳಾರಿಗೆ ಕವನದ ಮೂಲಕ ನಮನ ಸಲ್ಲಿಸಿದ್ದಾರೆ.

ದಿವಂಗತ ಲೋಕನಾಥ್ ಬೋಳಾರ್ ಅವರ ಸ್ಮರಣಾರ್ಥವಾಗಿ ಮಂಗಳೂರು ಯಾಂತ್ರೀಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಸೌತ್ ವಾರ್ಫ್ ಬಂದರ್ ಇದರ ಸದಸ್ಯರ ವತಿಯಿಂದ ಫೌಲರ್ ಕಾಟ್ ವಿತರಣಾ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಶನ್ ಆಸ್ಪತ್ರೆಗೆ ದಿ. ಲೋಕನಾಥ್ ಬೋಳಾರ್ ಅವರ ಸ್ಮರಣಾರ್ಥವಾಗಿ ಫೌಲರ್ ಕಾಟ್ ವಿತರಣೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಮಂಗಳೂರು ಯಾಂತ್ರೀಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಸೌತ್ ವಾರ್ಫ್ ಬಂದರ್ ಹಾಗೂ ಕೆಎಫ್‍ಡಿಸಿ ಇದರ ಅಧ್ಯಕ್ಷರಾದ ನಿತಿನ್ ಕುಮಾರ್ ಅವರು ಮಾತನಾಡಿ, ಮಂಗಳೂರು ಯಾಂತ್ರೀಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಭಿವೃದ್ಧಿಗೆ ಲೋಕನಾಥ್ ಬೋಳಾರ್ ಅವರ ಅವಧಿಯಲ್ಲಿ ಶ್ರಮಿಸಿದ್ದರು. ಅನೇಕ ಮಂದಿ ಮೀನುಗಾರರು ಸಹಕಾರಿ ಸಂಘದ ಪ್ರಯೋಜವನ್ನು ಪಡೆದುಕೊಳ್ಳುವಂತಾಯಿತು ಎಂದು ಹೇಳಿದರು.
ಆನಂತರ ವೆನ್ಲಾಕ್ ಆಸ್ಪತ್ರೆಯ ಡಿಎಮ್ ಡಾ.ಸದಾಶಿವ ಅವರು ಮಾತನಾಡಿ, ದಿ. ಲೋಕನಾಥ್ ಬೋಲಾರ್ ಅವರ ಸ್ಮರಣಾರ್ಥವಾಗಿ ಫೌಲರ್ ಕಾಟ್ ಸೇವೆಯನ್ನು ಮಂಗಳೂರು ಯಾಂತ್ರೀಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದಿಂದ ಆಸ್ಪತ್ರೆಗೆ ನೀಡಿದ್ದಾರೆ. ರೋಗಿಗಳಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಫೌಲರ್ ಕಾಟ್‍ನ್ನು ನೀಡಿದ್ದಾರೆ. ಅವರೆಲ್ಲರಿಗೂ ವೆನ್ಲಾಕ್ ಆಸ್ಪತ್ರೆಯ ಪರವಾಗಿ ಧನ್ಯವಾದ ಸಮರ್ಪಿಸಿದರು.

ಇದೇ ವೇಳೆ ಲೇಡಿಗೋಶನ್ ಆಸ್ಪತ್ರೆಯ ಡಾ. ದುರ್ಗಾಪ್ರಸಾದ್ ಅವರು ಮಾತನಾಡಿ, ದೈವೀಕವಾದಂತಹ ದೇವರು ಮೆಚ್ಚುವಂತಹ ಸಮಾಜ ಸೇವೆಯನ್ನು ದಿ. ಲೋಕನಾಥ್ ಬೋಳಾರ್ ಅವರ ಸ್ಮರಣಾರ್ಥ ಮಂಗಳೂರು ಯಾಂತ್ರೀಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದಿಂದ ಇವತ್ತು ಆಗಿದೆ. ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ಆಶೋತ್ತರಗಳನ್ನು ಈಡೇರಿಸುವ ಕೆಲಸ ಅವರಿಂದ ಆಗಿದೆ ಎಂದು ಹೇಳಿದರು.

ಈ ಸಂದರ್ಭ ಮಂಗಳೂರು ಯಾಂತ್ರೀಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಸೌತ್ ವಾರ್ಫ್ ಬಂದರ್ ಇದರ ನಿರ್ದೇಶಕರಾದ ಮನೋಹರ್ ಬೋಳೂರು, ದೇವಾನಂದ್ ಬೋಳೂರು, ರಾಮ್‍ಲಾಲ್ ಬೋಳೂರು, ಶಿವಾನಂದ್ ಬೋಳಾರ ಬಾಬು ಉಳ್ಳಾಲ್, ಶಶಿ ಮೆಂಡನ್, ಮೋಹನ್ ಬೆಂಗ್ರೆ, ದಿ. ಲೋಕನಾಥ್ ಬೋಳಾರ್ ಅವರ ಪತ್ನಿ ಡಾ. ದೇವಿ ಬೋಳಾರ, ಡಾ. ಮೋಹನ್ ಚಂದ್ರ ಸುವರ್ಣ, ಡಾ. ಜೆಸಿಂತ ಡಿಸೋಜಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *