Header Ads
Header Ads
Header Ads
Breaking News

ಸಾಧನೆಗೆ ಆಂಗ್ಲಭಾಷೆ ಪ್ರಾಮುಖ್ಯವಾದರೆ.. ಬದುಕಿನ ರಸನಿಮಿಷ ಅನುಭವಿಸಲು ಮಾತೃ ಭಾಷೆ ಅನಿವಾರ್ಯ ಕಾಪುವಿನಲ್ಲಿ ಡಾ| ಐ.ಆರ್. ಮಿತ್ತಂತ್ತಾಯ ಅಭಿಪ್ರಾಯ

ಜೀವನದಲ್ಲಿ ಯಾವುದೇ ಸಾಧನೆ ಮಾಡ ಬೇಕಾಗಿದ್ದರೆ ಆಂಗ್ಲ ಬಾಷೆ ಪ್ರಮುಖ್ಯವಾಗಿ ಬೇಕು. ಅದೇ ಬದುಕಿನ ಅನುಭವಗಳನ್ನು ರಸ ನಿಮಿಷಗಳನ್ನು ಅಸ್ವಾಧಿಸಲು, ಅನುಭವಿಸಲು ನಮ್ಮ ಮಾತೃಭಾಷೆ ಅಗತ್ಯವಾಗಿ ಬೇಕು ಎಂಬುದಾಗಿ ಡಾ| ಐ.ಆರ್. ಮಿತ್ತಂತ್ತಾಯ ಹೇಳಿದರು.

ಅವರು ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ವಾರ್ಷಿಕೋತ್ಸವ ಸಂದರ್ಭ ಎಂ.ಎ. ಗಪೂರ್‌ರವರಿಗೆ ನೀಡಲಾದ ವಿದ್ಯಾರತ್ನ ಪ್ರಶಸ್ತಿಯನ್ನು ಹಸ್ತಾಂತರಿಸಿ ಮಾತನಾಡಿದರು. ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಹೆತ್ತವರ ಜವಾಬ್ದಾರಿ ಮುಗಿದಿಲ್ಲ. ಬದಲಾಗಿ ಮಕ್ಕಳ ಚಲನವಲನಗಳ ಬಗ್ಗೆ ಗಮನ ಹಾಗೂ ಸಂಸ್ಕಾರಯುತವಾದ ನಮ್ಮ ಭವ್ಯ ಭಾರತದ ಸಂಸ್ಕೃತಿಯನ್ನು ತಿಳಿ ಹೇಳುವ ಗುರುತ್ತರವಾದ ಜವಾಬ್ದಾರಿ ಹೆತ್ತವರದ್ದಾಗಿದೆ ಎಂದರು.

ಇದೇ ವೇಳೆ ಎಂ.ಎ. ಗಪೂರ್‌ಗೆ ವಿದ್ಯಾರತ್ನ ಹಾಗೂ ಹಿರಿಯರಾದ ನಾರಾಯಣ ದೇವಾಡಿಗ ಹಾಗೂ ಪುರಸಭಾ ಉಪಾಧ್ಯಕ್ಷ ಉಸ್ಮಾನ್‌ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಕೆ.ಪಿ. ಆಚಾರ್ಯ, ಪ್ರಮುಖರಾದ ವಿ.ಕೆ. ಉದ್ಯಾವರ್, ವಿದ್ಯಾಧರ್ ಪುರಾಣಿಕ್, ಸಂತೋಷ್ ಕುಮಾರ್, ಒಪಿಲಿಯೋ ಕುಟಿನೋ, ಶಾಂತಿ, ಅಂಕಿತಾ ಪ್ರಭು ಉಪಸ್ಥಿತರಿದ್ದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply