Header Ads
Breaking News

ಸಾಮಾಜಿಕ ಪಿಡುಗುಗಳ ನಿವಾರಣೆಗೆ ಗಾಂಧಿ ಮಾರ್ಗವೊಂದೇ ಪರಿಹಾರ : ಡಾ.ಎನ್.ರಾಧಾಕೃಷ್ಣನ್ ಹೇಳಿಕೆ

ಮಂಜೇಶ್ವರ : ಸಮಾಜದಲ್ಲಿ ಅನಾಚಾರಗಳು ಹಾಗೂ ಸ್ವಚ್ಛಂದತೆಗಳು ತಾಂಡವವಾಡುತ್ತಿದ್ದು, ಇದು ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಕಂಟಕವಾಗಿ ಮಾರ್ಪಟ್ಟಿದೆ. ಕೇವಲ ಬೆರಳೆಣಿಕೆಯಷ್ಟು ಜನರು ಇದರ ಫಲಾನುಭವಿಗಳಾದರೆ; ಕೋಟ್ಯಂತರ ಜನರು ಇದರಿಂದಾಗಿ ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹಿರಿಯ ಗಾಂಧೀವಾದಿ, ತಿರುವನಂತಪುರ ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ರಾಧಾಕೃಷ್ಣನ್ ಹೇಳಿದರು.
ಹಿಂಸೆ, ಕೊಲೆ, ಮದ್ಯ-ಮಾದಕವಸ್ತಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತರ ಸಂಗಮ ಹಾಗೂ ವಿನೋಭಾ ವೆಂಕಟೇಶ್ ರಾವ್ ಶಾಂತಿಸೇನಾ ಫೌಂಡೇಶನ್ ವಾರ್ಷಿಕ ಅವಲೋಕನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬೆಳಗಾವಿಯ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಎ.ಆರ್.ಪಾಟೀಲ್. ಶಾಂತಿ ಸೇನಾ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಹರ್ಷಾದ್ ವರ್ಕಾಡಿ, ವಿ.ಕೆ.ಮೋಹನನ್, ಆರ್.ಪಿ.ರವೀಂದ್ರನ್, ಫಾದರ್ ಸ್ಕರಿಯಾ, ಶಿವನ್ ಅರುಣಾಚಲಂ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *