Header Ads
Header Ads
Breaking News

ಸಾಮಾಜಿಕ ಭದ್ರತೆ ಮತ್ತು ಕೌಟುಂಬಿಕ ಭದ್ರತೆಯ ಸಂವಾದ. ರಿಕ್ಷಾ ಚಾಲಕರಿಗೆ ಜನಪರ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯಾಗಾರ.

ಅಟೋರಿಕ್ಷಾ ಚಾಲಕರಿಗೆ ಸರಕಾರದಿಂದ ದೊರಕುವ ಭವಿಷ್ಯನಿಧಿ ಮತ್ತು ಕ್ಷೇಮನಿಧಿ ಸೌಲಭ್ಯವನ್ನು ದೊರಕಿಸಿ ಕೊಡುವ ಮೂಲಕ ರಿಕ್ಷಾ ಚಾಲಕರಿಗೆ ಸಾಮಾಜಿಕ ಭದ್ರತೆ ಮತ್ತು ಕೌಟುಂಬಿಕ ಭದ್ರತೆಯನ್ನು ಒದಗಿಸುವ ಬಗ್ಗೆ ಸಂವಾದ ಕಾರ್ಯಕ್ರಮವು ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಅಶೋಕ್ ಕೊಂಚಾಡಿ ಹೇಳಿದರು.ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ರಿಕ್ಷಾ ಚಾಲಕರಲ್ಲಿ ಅರಿವು ಮೂಡಿಸಿ ಸಾರ್ವಜನಿಕ ವಲಯದಲ್ಲಿ ಸಂವಾದವನ್ನು ನಡೆಸಿ ಜನಪರ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಆಗಸ್ಟ್ 18 ರಂದು ಸಂಜೆ3 ಗಂಟೆಗೆ ಮಲ್ಲಿಕಟ್ಟೆ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.ಈ ಸಂದರ್ಭ ಮಾದ್ಯಮಗೋಷ್ಟಿಯಲ್ಲಿ ಲಯನ್ಸ್ ಕ್ಲಬ್‌ನ ಉಪಾಧ್ಯಕ್ಷರಾದ ಲಯನ್ ಬಿ. ಸತೀಶ್ ರೈ, ಸಿಟಿಜನ್ ಫೋರಂ ಫಾರ್ ಮಂಗಳೂರು ಡೆವೆಲಪ್‌ಮೆಂಟ್‌ನ ವಿದ್ಯಾ ದಿನಕರ್, ವೆಲೋರೆಡ್‌ನ ರೆನ್ನಿ ಡಿ’ಸೋಜ, ಡಿಸ್ಕವರಿ ಲಾ ಅಕಾಡೆಮಿಯ ಕೆ.ಎಸ್.ಎನ್. ರಾಜೇಶ್, ಪನಿಯಾಲ ಅಸೋಸಿಯೇಟ್ಸ್‌ನ ವಿವೇಕಾನಂದ ಉಪಸ್ಥಿತರಿದ್ದರು.

Related posts

Leave a Reply