Header Ads
Breaking News

ಸಾರ್ವಜನಿಕರ ಅನುಕೂಲಕ್ಕಾಗಿ ನಿಟ್ಟೆ ತಾಂತ್ರಿಕ ಕಾಲೇಜಿನ ‘ಆಟೋ ಪ್ಲೀಸ್’ ಉಚಿತ ಎಪ್ಲಿಕೇಶನ್

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ‘ಆಟೋ ಪ್ಲೀಸ್’ ಎಂಬ ಒಂದು ವಿನೂತನ ಎಪ್ಲಿಕೇಶನ್ನೊಂದನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪರಿಚಯಿಸಿದೆ. ಈ ಎಪ್ಲಿಕೇಶನ್‍ನ ಮೂಲಕ ಸಾರ್ವಜನಿಕರು ತಮ್ಮ ಸಮೀಪದ ರಿಕ್ಷಾ ನಿಲ್ದಾಣವನ್ನು ಅಯ್ಕೆ ಮಾಡಿದಲ್ಲಿ, ಅಲ್ಲಿ ಸಂಚಾರಕ್ಕೆ ಲಭ್ಯವಿರುವ ಆಟೋರಿಕ್ಷಾಗಳ ಪಟ್ಟಿಯು ದೊರೆಯಲಿದೆ. ಇದರೊಂದಿಗೆ ಚಾಲಕನ ಹೆಸರು, ಭಾವಚಿತ್ರ, ಲೈಸನ್ಸ್ ಮುಂತಾದ ವಿವಿರಗಳನ್ನು ಪರಿಶೀಲಿಸಬಹುದಾಗಿದೆ. ಪಟ್ಟಿಯಲ್ಲಿ ಇರುವ ಚಾಲಕರ ಮಾಹಿತಿಯನ್ನು ಗಮನಿಸಿ ಆ ರಿಕ್ಷಾ ಚಾಲಕನಿಗೆ ಕರೆಮಾಡುವ ಸೌಲಭ್ಯವನ್ನೂ ಇದರಲ್ಲಿ ನೀಡಲಾಗಿದೆ. ಗ್ರಾಹಕರು ಈ ಎಪ್ಲಿಕೇಶನ್‍ನಲ್ಲಿ ನೋಂದಾವಣಿ ಮಾಡಬೇಕಾಗಿಲ್ಲದಿರುವುದು ಗ್ರಾಹಕಸ್ನೇಹಿ ಎಪ್ಲಿಕೇಶನ್ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಈ ಎಪ್ಲಿಕೇಶನ್ ಉಚಿತವಾಗಿದ್ದು, ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಕಂಪ್ಯೂಟರ್‍ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ವೇಣುಗೋಪಾಲ ಪಿ.ಎಸ್ ಅವರ ಮಾರ್ಗದರ್ಶನದಲ್ಲಿ ಚಿಂತನ್ ಹಾಗೂ ದ್ವನಿತ್ ಎಂಬ ಇಬ್ಬರು ಬಿ.ಇ ಪದವಿ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ ಈ ಎಪ್ಲಿಕೇಶನ್, ಕಾರ್ಕಳ ಹಾಗೂ ನಿಟ್ಟೆ ಪರಿಸರದಲ್ಲಿ ಅತಿಶೀಘ್ರದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಪ್ಲಿಕೇಶನ್‍ನನ್ನು ಡೌನ್ಲೋಡ್ ಮಾಡಲು https://play.google.com/store/apps/details?id=chinthan.autoplease  ಲಿಂಕ್ ಬಳಸಬಹುದಾಗಿದೆ.

Related posts

Leave a Reply

Your email address will not be published. Required fields are marked *