Header Ads
Breaking News

ಸಾರ್ವಜನಿಕ ಮತ್ತು ಸುಗಮ ಸಂಚಾರಕ್ಕೆ ಬಿಡಾಡಿ ದನಗಳ ಉಪಟಳ; ಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳಲ್ಲಿ ದನಗಳ ವಾಸ

ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮುಖ್ಯ ಕಚೇರಿಗಳ ಪರಿಸರದಲ್ಲಿ ಬಿಡಾಡಿ ದನ, ಕರುಗಳು ಹಗಲು ರಾತ್ರಿ ಬಂದು ಮಲಗಿ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತದೆ, ಮಾತ್ರವಲ್ಲದೆ ಅಪಘಾತಕ್ಕೂ ಕಾರಣವಾಗುತ್ತದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ರಸ್ತೆ ಮೇಲೆ ಅಡ್ಡಾದಿಡ್ಡಿಯಾಗಿ ಮಲಗುವುದು, ಸಂಚಾರಕ್ಕೆ ಅಡಚಣೆ ಮಾಡುತ್ತಿರುವುದರಿಂದ ಹಲವು ರಸ್ತೆ ಅಪಘಾತಗಳು ಈಗಾಗಲೆ ಸಂಭವಿಸಿದ್ದು, ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಜೀವಕ್ಕೆ ಹಾನಿ ಉಂಟಾಗುವ ಸಂಭವವಿದೆ. ಈ ವಿಷಯ ಗಂಭೀರವಾಗಿರುವುದರಿಂದ ದನ, ಕರುಗಳ ಮಾಲೀಕರಿಗೆ ಪಂಚಾಯತು ವತಿಯಿಂದ ಮುನ್ನೆಚ್ಚರಿಕೆ ನೀಡಿ ಅದನ್ನು ಅನುಸರಿಸದೇ ಇದ್ದರೆ ಜಾನುವಾರುಗಳನ್ನು ಪಂಚಾಯತು ವಶಕ್ಕೆ ತೆಗೆಯಬೇಕು ಎಂದು ಊರವರು ಅಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *