

ಬೆಂಗಳೂರಿನ ಟೆಲ್ಕಾನ್ ಗ್ರೂಪ್ ಸಹಯೋಗದೊಂದಿಗೆ “ಎನಿ ಎಲ್ಪ್” ಎಂಬ ಆನ್ ಡಿಮಾಂಡ್ ಸೇವೆಯನ್ನು ಹೊಂದಿರುವ ಆನ್ಲೈನ್ ಅಪ್ಲಿಕ್ಲೇಶನ್ ಅತೀ ಶೀಘ್ರದಲ್ಲಿ ಉಡುಪಿಯೂ ಸೇರಿದಂತೆ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಆರಂಭಗೊಳ್ಳಲಿದೆ ಎಂದು ಟೆಲ್ಕಾನ್ ಗ್ರೂಪ್ ನ ಸಿ.ಇ.ಒ ಮಹಮ್ಮದ್ ಝಾಕೀರ್ ಹುಸೇನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಎನಿ ಹೆಲ್ಪ್ ಮೂಲಕ ಸಾರ್ವಜನಿಕರು ತಮಗೆ ಅಗತ್ಯ ಇರುವ ಯಾವುದೇ ಸಾರ್ವಜನಿಕ ಸೇವೆಯನ್ನು ಆನ್ ಲೈನ್ ಮೂಲಕ ಪಡೆಯಲು ಸಾದ್ಯವಿದೆ. ಅವರಿಗೆ ಬೇಕಾದ ಸೇವೆಯನ್ನು ನುರಿತ ವೃತ್ತಿಪರ ತಜ್ಞರು ಮನೆಗೆ ಬಂದು ನಿಡಲಿದ್ದಾರೆ. ಸದ್ಯ ಮೂವತ್ತು ತುರ್ತು ಸೇವೆಗಳನ್ನು ಗುರುತಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಆನ್ಲೈನ್ ಮೂಲಕ ಸಂಪರ್ಕಿಸಿದರೆ ಕೆಲವೇ ಹೊತ್ತಿನಲ್ಲಿ ಸಂಬಂಧಪಟ್ಟವರು ನೇರವಾಗಿ ಮನೆಗೆ ಬಂದು ಅದನ್ನ ದುರಸ್ತಿಗೊಳಿಸಲಿದ್ದಾರೆ.ಮುಂದಿನ ಜನವರಿಯಲ್ಲಿ ಉಡುಪಿ ನಗರಕ್ಕೆ ಸೀಮಿತವಾಗಿ ಈ ಸೇವೆ ಆರಂಭಗೊಳ್ಳಲಿದ್ದು ಮುಂದೆ ಇಡೀ ಜಿಲ್ಲೆಗೆ ವಿಸ್ತರಣೆ ಆಗಲಿದೆ ಎಂದು ಝಾಕೀರ್ ಹುಸೇನ್ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಆಡಳಿತ ನಿರ್ದೆಶಕಿ ಪೂಜಾಶ್ರೀ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ವಿಷ್ಣುಪ್ರಸಾದ್, ಬೆಂಗಳೂರು ಮುಖ್ಯಸ್ಥಸಮೀರ್ ಹಾಗೂ ಲತಾ ಉಪಸ್ಥಿತರಿದ್ದರು.