Header Ads
Header Ads
Breaking News

ಸಿಂಡಿಕೇಟ್ ಬ್ಯಾಂಕ್ ಆಶ್ರಯದಲ್ಲಿ ಸಿಂಡ್ ವಾಹನ ಮೇಳ -2019 : ರೆನಾಲ್ಟ್ ಕಂಪೆನಿಯ ನೂತನ ಶ್ರೇಣಿಯ ರೆನೋಕ್ವಿಡ್ ಕಾರಿನ ಅನಾವರಣ

ಸಿಂಡಿಕೇಟ್ ಬ್ಯಾಂಕ್ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಸಿಂಡ್ ವಾಹನ ಮೇಳ _ 2019 ಉದ್ಘಾಟನೆಗೊಂಡಿತು. ರೆನಾಲ್ಟ್ ಕಂಪೆನಿಯ ನೂತನ ಶ್ರೇಣಿಯ ರೆನೋಕ್ವಿಡ್ ಕಾರಿನ ಅನಾವರಣ ಕಾರ್ಯಕ್ರಮವೂ ನಡೆಯಿತು.

ರೆನಾಲ್ಟ್ ಕ್ವಿಡ್ ಈಗಾಗಲೇ ಗ್ರಾಹಕರ ಅಚ್ಚುಮೆಚ್ಚಿನ ಕಾರಾಗಿದ್ದು ಇದೀಗ ಹೊಸ ತಂತ್ರಜ್ಞಾನದಿಂದ ಕೂಡಿದ ನೂತನ ಶ್ರೇಣಿಯ ಕಾರು ಮಾರುಕಟ್ಟೆಗೆ ಬಂದಿದ್ದು, ನೆರೆದ ಗಣ್ಯರು ಈ ಕಾರನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇದಕ್ಕೂ ಮೊದಲು ನಡೆದ ಸಿಂಡ್ ವಾಹನ ಮೇಳವನ್ನು ಟಿ.ಎಂ.ಎ ಪೈ ಸಮೂಹ ಸಂಸ್ಥೆಯ ಕಾರ್ಯದರ್ಶಿ ಟಿ.ಸತೀಶ್ ಪೈ ರಿಬ್ಬನ್ ಕತ್ತರಿಸುವ ಹಾಗೂ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಾಹನ ಮೇಳದ ಮೂಲಕ 16ಕೋಟಿ ವ್ಯವಹಾರವಾಗಲಿ ೩೦೦ಕ್ಕೂ ಅಧಿಕ ಲೋನ್‌ನನ್ನು ಗ್ರಾಹಕರು ಪಡೆಯುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ರೀಜಿನಲ್ ಮ್ಯಾನೆಜರ್ ಭಾಸ್ಕರ್ ಹಂದೆ, ಮಣಿಪಾಲ ರಿಜಿಸ್ಟಾರ್ ಕಚೇರಿಯ ಇನ್ಸ್ಪೆಕ್ಷನ್ ಸೆಲ್‌ನ ಜನರಲ್ ಮ್ಯಾನೇಜರ್ ಗಿರಿಧರ್ ವಿ.ಎಂ, ಎಸ್.ಎಸ್. ಹೆಗ್ಡೆ, ರಮಾನಾಯಕ್ ಉಪಸ್ಥಿತರಿದ್ದರು.

ಎರಡು ದಿನಗಳ ವಾಹನ ಮೇಳದಲ್ಲಿ ವಿವಿಧ ಕಂಪೆನಿಯ ವಾಹನಗಳ ಟೆಸ್ಟ್ ಡ್ರೈವಿಂಗ್ ಹಾಗೂ ಸ್ಥಳದಲ್ಲೇ ಸಾಲ ಒದಗಿಸಲು ಎಲ್ಲಾ ವ್ಯವಸ್ಥೆಯನ್ನ ಬ್ಯಾಂಕ್ ವತಿಯಿಂದ ಮಾಡಲಾಗುತ್ತಿದೆ. ಇಂದು ಗಣ್ಯರ ಉಪಸ್ಥಿತಿಯಲ್ಲಿ ನೂತನ ಕಾರುಗಳ ಅನಾವರಣ ಕಾರ್ಯಕ್ರಮ ಕೂಡಾ ನಡೆಯಿತು.

Related posts

Leave a Reply

Your email address will not be published. Required fields are marked *