Header Ads
Breaking News

ಸಿಡಿಲು ಬಡಿದು ಮನೆಗೆ ಹಾನಿ : ಸುಮಾರು 50 ಸಾವಿರ ಮೌಲ್ಯದ ಸೊತ್ತುಗಳು ಹಾನಿ

ಮೂಡುಬಿದಿರೆ: ಪಡುಮಾರ್ನಾಡು ಗ್ರಾ.ಪಂ ವ್ಯಾಪ್ತಿಯ ಮೂಡುಮಾರ್ನಾಡು ಗ್ರಾಮದ ಮುಗೇರಕಲ ಎಂಬಲ್ಲಿ ಗುರುವಾರ ಮಧ್ಯಾಹ್ನ ಸಿಡಿಲು ಬಡಿದು ಮನೆಗೆ ಹಾನಿಯಾಗಿದ್ದು, ಮನೆಯ ನಾಯಿ ಸಾವನ್ನಪ್ಪಿದೆ. ಮುಗೇರಕಲದ ರುಕ್ಕಯ್ಯ ಮುಗೇರ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಸುಮಾರು 5೦ ಸಾವಿರ ಮೌಲ್ಯದ ಸೊತ್ತುಗಳು ಹಾನಿಯಾಗಿವೆ. ಮನೆಯ ಅಡಿಪಾಯ, ಗೋಡೆ ವಿದ್ಯುತ್ ಉಪಕರಣಗಳು ಹಾನಿಯಾಗಿವೆ. ಸಿಡಿಲು ಬಡಿದ ಪರಿಣಾಮ ರುಕ್ಕಯ್ಯ ಅವರು ಮೂರ್ಛೆ ಬಿದ್ದಿದ್ದು, ಅವರಿಗೆ ಮೂಡುಬಿದಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಕ್ಕದ ಮನೆಯ ಸಂಜೀವ ಅವರ ಮನೆಗೂ ಹಾನಿಯಾಗಿದ್ದು, ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ. ಕಳೆದ ವರ್ಷದ ಮಳೆಗಾಲದಲ್ಲೂ ರುಕ್ಕಯ್ಯ ಮುಗೇರ ಅವರ ಮನೆ ಸಿಡಿಲು ಬಡಿದು ಹಾನಿಯಾಗಿತ್ತು.

Related posts

Leave a Reply

Your email address will not be published. Required fields are marked *