Header Ads
Breaking News

ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ತರಹೇವಾರಿ ತರಕಾರಿಗಳ ಪ್ರದರ್ಶನ

ಬಂಟ್ವಾಳ: ಸಿದ್ಧಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ತರಹೇವಾರಿ ತರಕಾರಿಗಳ ಪ್ರದರ್ಶನ.. ಬೆಂಡೆ, ಅಲಸಂಡೆ, ಕುಂಬಳಕಾಯಿ, ಚೀನಿಕಾಯಿ ಹೀಗೆ ಬಗೆಬಗೆಯ ತರಕಾರಿಗಳು. ಇದ್ಯಾವುದೋ ಪ್ರಗತಿಪರ ಕೃಷಿಕ ಬೆಳೆದು ಶಾಲೆಗೆ ನೀಡಿದ್ದಲ್ಲ, ಬದಲಿಗೆ ಶಾಲೆ ವಿದ್ಯಾರ್ಥಿಗಳೇ ಮನೆಯಲ್ಲಿ ಬೆಳೆದು ತಂದ ಕಾಯಿಪಲ್ಲೆಗಳು. ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಶಾಲಾ ಉಪಪ್ರಾಂಶುಪಾಲ ರಮಾನಂದ ನೂಜಿಪ್ಪಾಡಿ ಅವರ ಮಾರ್ಗದರ್ಶನದಲ್ಲಿ ಕಳೆದ ಜೂ.5, ಪರಿಸರ ದಿನದಂದು ಶಾಲೆಯ 2o5ಮಕ್ಕಳಿಗೆ ವಿವಿಧ ಬಗೆಯ ತರಕಾರಿ ಬೀಜವನ್ನು ನೀಡಲಾಗಿತ್ತು.

ಮಕ್ಕಳು ಪಾಲಕರ ನೆರೆವಿನೊಂದಿಗೆ ಮನೆ ಸುತ್ತಮುತ್ತ ಈ ಬೀಜಗಳನ್ನು ಬಿತ್ತಿ, ಗಿಡಗಳಿಗೆ ಸಾವಯವ ಗೊಬ್ಬರಗಳನ್ನು ಹಾಕಿ ಪೋಷಣೆ ಮಾಡಿದ್ದರು. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕಂತೆ ಗಿಡಗಳು ಸಮೃದ್ದವಾಗಿ ಬೆಳೆದು ಉತ್ತಮ ಫಲನೀಡಿದೆ. ಆ ಮೂಲಕ ವಿದ್ಯಾಥಿಗಳಿಗೆ ಕೃಷಿ ಆಸಕ್ತಿ ಮೂಡಿಸುವ ಶಿಕ್ಷಕರ ಪ್ರಯತ್ನವೂ ಫಲ ಕೊಟ್ಟಿದೆ.

Related posts

Leave a Reply

Your email address will not be published. Required fields are marked *