Header Ads
Header Ads
Breaking News

ಸುಂಕದಕಟ್ಟೆಯ ಬ್ಯಾಂಕ್ ಆಫ್ ಬರೋಡಾದ ನೇತೃತ್ವದಲ್ಲಿ ವಿಶ್ವ ಪೋಷಕರ ದಿನದ ಅಂಗವಾಗಿ ಕೃಷಿ ಪಾಕ್ಷಿಕ ಮೇಳ

ಸುಂಕದಕಟ್ಟೆಯ ಬ್ಯಾಂಕ್ ಆಫ್ ಬರೋಡಾದ ನೇತೃತ್ವದಲ್ಲಿ ವಿಶ್ವ ಪೋಷಕರ ದಿನದ ಅಂಗವಾಗಿ ಸಮೃದ್ಧ ರೈತ ಸಮೃದ್ಧಿ ಭಾರತ ಎಂಬ ಘೋಷಣೆಯೊಂದಿಗೆ ಕೃಷಿ ಪಾಕ್ಷಿಕ ಮೇಳವು ವರ್ಕಾಡಿ ಗ್ರಾ. ಪಂ. ಮೈದಾನದಲ್ಲಿ ನಡೆಯಿತು. ಕೃಷಿ ಪಾಕ್ಷಿಕ ಮೇಳಕ್ಕೆ ಆಗಮಿಸಿದ ಅತಿಥಿಗಳನ್ನು ಬಾಂಕಿನ ಪದಾಧಿಕಾರಿಗಳು ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡ್ರು. ಬಳಿಕ ಬಾಂಕ್ ಆಫ್ ಬರೋಡಾ ಸ್ಥಾಪಕ ಮಹಾರಾಜ ಸಯಾಜಿ ರಾವ್ ಗಾಯಕವಾಡ್ ಇವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ಕೋಜಿಕ್ಕೋಡ್ ರೀಜನಲ್ ಮ್ಯಾನೇಜರ್ ಕೆ ಯು ಜಯಚಂದ್ರನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಾಂಕ್ ಆಫ್ ಬರೋಡಾದ ಜನರಲ್ ಮ್ಯಾನೇಜರ್ ವೆಂಕಟೇಶನ್ ಕೆ ಉದ್ಘಾಟಿಸಿದರು . ಬಳಿಕ ಮಾತನಾಡಿದ ಅವರು ಬಾಂಕ್ ವಿಲೀನ ಗೊಂಡ ಬಳಿಕ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಬಾಂಕ್ ಆಗಿದೆ ಬಾಂಕ್ ಆಫ್ ಬರೋಡಾ. ಜೊತೆಯಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಪ್ರತ್ಯೇಕವಾಗಿಯೂ ಕೃಷಿಕರಿಗಾಗಿ ಸಾಲ ಮೇಳವನ್ನು ನೀಡಲಾಗುತ್ತದೆ . ಉತ್ತಮ ವ್ಯವಹಾರವನ್ನು ನಡೆಸುವ ಗ್ರಾಹಕರಿಗೆ ಮತ್ತು ಬಡ್ಡಿ ದರದಲ್ಲಿ ರಿಯಾಯಿತಿಯನ್ನು ನೀಡಲಾಗುತ್ತದೆ ಎಂಬುದಾಗಿ ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ರೀಜನಲ್ ಮ್ಯಾನೇಜರ್ ಕೆ.ಯು ಸುರೇಂದ್ರನ್ ಮಾತನಾಡಿ : ಬ್ಯಾಂಕ್ ಆಫ್ ಬರೋಡಾ ಕೊಜಿಕ್ಕೋಡ್ ಹಾಗೂ ಕಾಸರಗೋಡು ಸಾಖೆಯ ಜಂಟಿ ಆಶ್ರಯದಲ್ಲಿ ಇಂದು ವಿಶ್ವ ಪೋಷಕ ದಿನದಂಗವಾಗಿ ಕಿಸಾನ್ ದಿವಸವನ್ನು ಆಚರಿಸಲಾಗುತ್ತಿದೆ ಅಂತ ಹೇಳಿದ್ರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಸರಗೋಡು ಕೃಷಿ ಅಧಿಕಾರಿ ಉಮೇಶ್ ಪಿ.ವಿ ಮಾತನಾಡಿ ಬಾಂಕ್ ಆಫ್ ಬರೋಡಾ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದಕ್ಕೆ ಅತೀವ ಸಂತೋಷವಿದೆ. ಕೃಷಿ ಭವನ ಕೂಡಾ ಕೃಷಿಕರಿಗೆ ಬೇಕಾದ ಎಲ್ಲಾ ರೀತಿಯ ಸಹಾಯಗಳನ್ನು ನೀಡುತ್ತಾ ಬಂದಿದೆ ಎಂಬುದಾಗಿ ಅವರು ಹೇಳಿದರು.
ಮಂಜೇಶ್ವರದ ಕೃಷಿ ಅಧಿಕಾರಿ ನಿಶಾ ಮೇರಿ ಮುಖ್ಯ ಅತಿಥಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ಬಾಂಕಿನ ವಿವಿಧ ಶಾಖೆಗಳಲ್ಲಿ ಅತ್ಯತ್ತಮ ವಹಿವಾಟು ನಡೆಸಿದ ಗ್ರಾಹಕರನ್ನು ಗುರುತಿಸಿ ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅದೇ ರೀತಿಯಲ್ಲಿ ಬಾಂಕೆಮಿನ ವಿವಿಧ ಶಾಖೆಗಳ ರೈತರಿಗೆ ಸಾಲ ಅನುದಾನ ಪತ್ರಗಳನ್ನು ಕೂಡಾ ವಿತರಿಸಲಾಯಿತು. ಬಳಿಕ ಕೃಷಿಗೆ ಸಂಬಂಧಿಸಿದ ವಿವಿಧ ವಸ್ತುಗಳ ಪ್ರದರ್ಶನ ಕೂಡಾ ನಡೆಯಿತು. ಕಾರ್ಯಕ್ರಮಕ್ಕೆ ನಾನಾ ದಿಕ್ಕಿನಿಂದ ನೂರಾರು ಮಂದಿ ಆಗಮಿಸಿದ್ದರು.

Related posts

Leave a Reply

Your email address will not be published. Required fields are marked *