Header Ads
Header Ads
Header Ads
Breaking News

ಸುಜ್ಲಾನ್ ಕಂಪನಿಯ ಒಪ್ಪಂದಕ್ಕೆ ಕಾರ್ಮಿಕರ ಅಂತಿಮ ಸಹಿ ಮೂರು ದಿನಗಳೊಳಗೆ ಕಂಪೆನಿ ಪುನರಾರಂಭ ಸಾಧ್ಯತೆ

ಅಂತೂ ಇಂತೂ ಕುಂಟುತ್ತಾ ಸಾಗುತ್ತಿದ್ದ ಸುಜ್ಲಾನ್ ಲಾಕೌಟ್ ಪ್ರಕರಣ ಕಾರ್ಮಿಕರು, ಕಂಪೆನಿಯ ಕಠಿಣ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಕಂಪನಿ ಪುನರಾರಂಭದ ಸಾಧ್ಯತೆಗಳು ಹೆಚ್ಚಾಗಿದೆ. ನಿರೀಕ್ಷೇಯ ಪ್ರಕಾರ ಮುಂದಿನ ಮೂರು ದಿನದೊಳಗೆ ಮತ್ತೆ ಕೆಲಸ ಆರಂಭಗೊಳ್ಳಲಿದೆ.

ವರ್ಷಗಳ ಕಾಲ ಸಂಬಳದಲ್ಲಿ ಹೆಚ್ಚಳವಿಲ್ಲ, ನಿಗದಿತ ಸಮಯದಲ್ಲಿ ಬ್ಲೇಡ್ ನಿರ್ಮಾಣ ಮಾಡದಿದ್ದಲ್ಲಿ ಕಾರ್ಮಿಕರ ವಿರುದ್ಧ ಕ್ರಮ, ಕಂಪನಿ ಆರ್ಥಿಕ ನಷ್ಟ ಹೊಂದಿದ್ದಲ್ಲಿ ಕಾರ್ಮಿಕರ ವಿರುದ್ಧ ಕಾನೂನು ಕ್ರಮ, ಯಾವುದೇ ಸಂದರ್ಭದಲ್ಲಿ ಮಾದ್ಯಮದ ಮುಂದೆ ಕಂಪನಿಯ ವಿರುದ್ಧ ದೂರಿದ್ದಲ್ಲಿ ಅಂಥವರ ವಿರುದ್ಧ ಕ್ರಮ ಮುಂತಾದ ಜಂಟಿಲ ಸಮಸ್ಯೆಗಳ ಒಪ್ಪಂದಕ್ಕೆ 269 ಮಂದಿ ಸಹಿ ಹಾಕಲಾಗಿದ್ದು, ಹೊರ ರಾಜ್ಯಗಳ ಕಾರ್ಮಿಕರು ಇಷ್ಟರಲ್ಲೆ ಊರಿಗೆ ತೆರಳಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಬರುವವರು ಒಪ್ಪಂದಕ್ಕೆ ಸಹಿ ಹಾಕ ಬೇಕಾಗಿದೆ, ಒಟ್ಟು 330 ಮಂದಿ ಕಾರ್ಮಿಕರು ಕಂಪನಿಗೆ ಮರು ನೇಮಕಗೊಂಡಂತ್ತಾಗಿದ್ದು, ಮುಂದಿನ ಮೂರು ದಿನದೋಳಗೆ ಕಂಪನಿ ಕೆಲಸ ಆರಂಭಗೊಳಿಸಲಿದ್ದು, ಲಾಕೌಟೌ ಆದ ದಿನಗಳಿಂದಲೇ ಕಾರ್ಮಿಕರಿಗೆ ವೇತನ ನೀಡಲಾಗುವುದು ಎಂಬುದಾಗಿ ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ ಎಂಬುದಾಗಿ ಇಂಟೇಕ್ ರಾಜ್ಯಾದ್ಯಕ್ಷ ರಾಖೇಶ್ ಮಲ್ಲಿ ಹೇಳಿದ್ದಾರೆ.

ಕಾರ್ಮಿಕರ ಪರವಾಗಿ ಹೋರಾಟ ನಡೆಸಿದ ನವೀನ್‌ಚಂದ್ರ ಶೆಟ್ಟಿ ಮಾತನಾಡಿ, ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಕಂಪನಿ ಈಡೇರಿಸಿದೆ, ಅಂತೆಯೆ ಕಂಪನಿಯು ಕೂಡಾ ಕೆಲವೊಂದು ನಿಯಮ ನಿಬಂಧನೆಗಳನ್ನು ವಿಧಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ ಮುಂದಿನ ದಿನದಲ್ಲಿ ಎಲ್ಲಾವೂ ಸರಿಯಾಗಲಿದೆ ಎಂದರು.
ಈ ಸಂದರ್ಭ ಇಂಟೇಕ್ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್ ಸಹಿತ ವಿವಿಧ ನಾಯಕರುಗಳು ಉಪಸ್ಥಿತರಿದ್ದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply