Header Ads
Breaking News

ಸುನ್ನಿ ದಾವತ್ತೆ ಇಸ್ಲಾಮಿ 19ನೇ ವಾರ್ಷಿಕದಂಗವಾಗಿ ಸುನ್ನಿ ಇಜ್ತಿಮಾ; ಉಪ್ಪಳ ಹನಫಿ ಬಜಾರ್ ಮರಿಕೆ ಪ್ಲಾಜಾದಲ್ಲಿ ನಡೆದ ಕಾರ್ಯಕ್ರಮ

ಮಂಜೇಶ್ವರ: ಸುನ್ನಿ ದಾವತ್ತೆ ಇಸ್ಲಾಮಿ ಉಪ್ಪಳ ಘಟಕ ಇದರ 19 ನೇ ವಾರ್ಷಿಕೋತ್ಸವದಂಗವಾಗಿ ಸುನ್ನಿ ಇಜ್ತಿಮಾವನ್ನು ಹಮ್ಮಿಕೊಳ್ಳಲಾಯಿತು. ಉಪ್ಪಳ ಹನಫಿ ಬಜಾರ್ ಮರಿಕೆ ಪ್ಲಾಜಾ ದಲ್ಲಿ ಹಾಜಿ ಕೆ ಎಸ್ ಹುಸೈನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿಶ್ವ ಇಸ್ಲಾಮಿಕ್ ಮಿಶನ್ ಪ್ರಧಾನ ಕಾರ್ಯದರ್ಶಿ ಹಾಗೂ ಪಂಡಿತ ಶಿರೋಮಣಿ ಅಲ್ಲಾಮ ಖಮರುಸ್ಸಮಾನ್ ಅಝ್ಮಿ ಲಂಡನ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಇಂದು ಮುಸ್ಲಿಂ ಸಮುದಾಯ ಬಹಳ ಅಪಾಯದ ಸ್ಥಿತಿಯಲ್ಲಿ ಇದೆ. ನಾವು ಅಲ್ಲಾವುವಿನಲ್ಲಿ ಹಾಗೂ ಅವನ ಔಲಿಯಾಗಳಲ್ಲಿ ಭರವಸೆಗಳನ್ನಿಟ್ಟು ಮುನ್ನಡೆಯಬೇಕಾಗಿದೆ. ಶೈಕ್ಷಣಿಕ ರಂಗದಲ್ಲೂ ಅದೇ ರೀತಿ ಇತರ ಚಟುವಟಿಕೆಗಳಲ್ಲೂ ಯುವ ಸಮೂಹಕ್ಕೆ ಪ್ರೋತ್ಸಾಹವನ್ನು ನೀಡಿ ಉತ್ತಮ ಭಾರತೀಯರಾಗುವಂತೆ ಮಾಡಬೇಕಾಗಿದೆ. ನಮ್ಮ ಉತ್ತಮ ಚಟುವಟಿಕೆಗಳು ಇತರರಿಗೆ ಮಾರ್ಗದರ್ಶಕವಾಗಬೇಕಾಗಿದೆ. ಅಲ್ಲಾಹನನ್ನು ರಸೂಲ್ ನನ್ನು ಹಾಗೂ ಅತನ ಔಲಿಯಾಗಳನ್ನು ಪ್ರೀತಿಸುವ ಉತ್ತಮ ಉಮ್ಮತಿಯಾಗಲು ನಮ್ಮೆಲ್ಲರನ್ನು ಪರಮ ದಯಮನಾದ ಅಲ್ಲಾವು ಅನುಗ್ರಹಿಸಲಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ಮುಖ್ಯ ಪ್ರಭಾಷಣವನ್ನು ಮಾಡಿದ ಅಮೀರ್ ಸುನ್ನಿ ದಾವತ್ತೆ ಇಸ್ಲಾಮಿ ಮುಂಬೈ ಘಟಕದ ವಾಗ್ಮಿ ಮೌಲಾನಾ ಶಾಕಿರ್ ನೂರಿ ಮಾತನಾಡಿ ನಾವು ಕೇವಲ ಈ ಲೋಕದಲ್ಲೂ ಉತ್ತಮ ವ್ಯಕ್ತಿ ಎಂದು ಅನಿಸಿಕೊಂಡರೆ ಸಾಲದು ಪರಲೋಕದಲ್ಲೂ ನಾವು ಅಲ್ಲಾವುನಿಗೆ ಇಷ್ಟಪಡುವ ಆತನ ದಾಸನಾದರೆ ಮಾತ್ರ ನಾವು ಒಬ್ಬ ನೈಜ ಮುಸಲ್ಮಾನೆಂದೆನೆಸಿಕೊಳ್ಳುತ್ತೇವೆ. ಇದಕ್ಕೆ ನಾವು ಕೇವಲ ಉಪವಾಸ ಹಿಡಿದರೆ ಅಥವಾ ಹಜ್ ನಿರ್ವಹಿಸಿದರೆ, ಝಕಾತ್ ನೀಡಿದರೆ ಸಾಲದು ನಮಾಜನ್ನು ಚಾಚೂ ತಪ್ಪದೆ ನಿರ್ವಹಿಸಿ ಎಲ್ಲರಿಗೂ ಉತ್ತಮ ವ್ಯಕ್ತಿಯಾಗಿ ಪರಿವರ್ತನೆ ಕೊಳ್ಳಬೇಕು. ನಮ್ಮ ಮಕ್ಕಳಿಗೂ ನಾವು ಉತ್ತಮ ನಡೆವಳಿಕೆಯ ಬಗ್ಗೆ ಕಲಿಸಿಕೊಡಬೇಕಾಗಿದೆ. ದೇಶ ಪ್ರೇಮ ಕೂಡಾ ನಮ್ಮ ಇಬಾದತ್ತಿನಲ್ಲೊಂದಾಗಿದೆ. ಉತ್ತಮವಾದ ದೇಶವನ್ನು ಕಟ್ಟುವುದರಲ್ಲೂ ನಾವು ಇತರರಿಗೆ ಮಾದರಿಯಾಗಬೇಕಾಗಿದೆ ಎಂದು ಅವರು ಹೇಳಿದರು.

ಬಳಿಕ ವೇದಿಕೆಯಲ್ಲಿ ಖುರಾನ್ ಗ್ರಂಥವನ್ನು ಪೂರ್ಣವಾಗಿ ಕಂಠ ಪಾಠ ಮಾಡಿದ ಏಳು ವಿದ್ಯಾರ್ಥಿಗಳಿಗೆ ಹಾಫಿಝ್ ಬಿರುದನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭ ವಾಗ್ಮಿಗಳಾದ ಮೌಲಾನಾ ರಿಯಾಝುದ್ದೀನ್ ರಾಜಸ್ತಾನ್, ಮೌಲಾನಾ ಇಮ್ತಿಯಾಝ್ ಮುಂಬೈ, ಮೊಹಮ್ಮದ್ ಅಸ್ಲಂ ಗೋವಾ, ಮೊಹಮ್ಮದ್ ಹನೀಫ್ ಕರ್ನಾಟಕ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಸಯ್ಯದ್ ತೌಫೀಕ್, ಅಫೀಝ್ ಮುಸ್ತಾಕ್, ಅಫೀಝುರಹಿಮಾನ್, ಅಕ್ಬರ್ ಬಿ ಎಸ್, ಅಜೀಂ ಮಣಿಮುಂಡ, ಮೊಹಮ್ಮದ್ ನಿಝಾಂ ಮೊದಲಾದವರು ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿದರು.

Related posts

Leave a Reply

Your email address will not be published. Required fields are marked *