Header Ads
Header Ads
Breaking News

ಸುಪ್ರೀಂ ಬಜಾಜ್ ವತಿಯಿಂದ ದ್ವಿಚಕ್ರ ವಾಹನ ಮೇಳ: ಬಜಾಜ್ ಪ್ಲಾಟಿನಾ ಹೆಚ್‌ಗೇರ್ 110 ಮತ್ತು ಸಿಟಿ110 ಬೈಕ್‌ಗಳು ಬಿಡುಗಡೆ

ಬೈಕ್ ಪ್ರಿಯರಿಗೊಂದು ಸಿಹಿಸುದ್ದಿ. ಹೊಸ ಬೈಕ್‌ಗಾಗಿ ಅಲ್ಲಿ ಇಲ್ಲಿ ಅಲೆದಾಡಬೇಕಿಲ್ಲ. ಸುಪ್ರೀಂ ಸಂಸ್ಥೆಯ ವತಿಯಿಂದ ಮಂಗಳೂರಿನ ಅತ್ತಾವರದಲ್ಲಿ ಎರಡು ದಿನಗಳ ದ್ವಿಚಕ್ರ ವಾಹನಗಳ ಬಹುದೊಡ್ಡ ಮೇಳವನ್ನು ಆಯೋಜಿಸಿದೆ. ಇದರಲ್ಲಿ ಮುಖ್ಯವಾಗಿ ನೂತನವಾಗಿ ಆವಿಷ್ಕಾರಗೊಂಡ ಬಜಾಜ್‌ನವರ ಪ್ಲಾಟಿನಾ ಹೆಚ್ ಗೇರ್ 110ಸಿಸಿ ಮತ್ತು ಸಿ.ಟಿ 110 ಸಿಸಿ ಬೈಕ್‌ಗಳನ್ನ ಬಿಡುಗಡಗೊಳಿಸಲಾಯಿತು. ಇಲ್ಲಿ ನಿಮಿಗಿಷ್ಟವಾದ ಬೈಕ್‌ಗಳನ್ನು ಇಲ್ಲಿ ಖರೀದಿ ಮಾಡಿ ನಿಮ್ಮ ಕನಸನ್ನು ನನಸಾಗಿಸಿ.

ಹೌದು.. ಮಂಗಳೂರಿನ ಅತ್ತಾವರದಲ್ಲಿ ಸುಪ್ರೀಂ ಸಂಸ್ಥೆಯ ವತಿಯಿಂದ ಎರಡು ದಿನಗಳ ದ್ವಿಚಕ್ರ ವಾಹನಗಳ ಬಹುದೊಡ್ಡ ಮೇಳವನ್ನು ಆಯೋಜಿಸಲಾಗಿದ್ದು, ಈ ಮೇಳವನ್ನು ಆರ್‌ಟಿಓ ಅಧಿಕಾರಿ ಚಂದ್ರ ಉಪ್ಪಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು. ಬಳಿಕ ನೂತನವಾಗಿ ಆವಿಷ್ಕಾರಗೊಂಡ ಪ್ಲಾಟಿನಾ ಹೆಚ್ ಗೇರ್ 110ಸಿಸಿ ಮತ್ತು ಸಿ.ಟಿ 110 ಸಿಸಿ ಬೈಕ್‌ಗಳನ್ನ ಮ್ಯಾನೇಜಿಂಗ್ ಡೈರೆಕ್ಟರ್ ಅರ್ಜುನ್ ರಾವ್, ಹೆಚ್ ಆರ್ ಹೆಡ್ ರೆನಾಲ್ಡ್, ಸೇಲ್ಸ್ ವಿಭಾಗ್ ಅಸಿಸ್ಟೆಂಟ್ ಜನೆರಲ್ ಮ್ಯಾನೇಜರ್, ರಾಘವೇಂದ್ರ ಪ್ರಸಾದ್, ಸರ್ವೀಸ್ ವಿಭಾಗದ ಅಸಿಸ್ಟೆಂಟ್ ಜನೆರಲ್ ಮ್ಯಾನೇಜರ್ ಗುರುಪ್ರಸಾದ್ ಸಮ್ಮುಖದಲ್ಲಿ ಆರ್‌ಟಿಓ ಅಧಿಕಾರಿ ಚಂದ್ರ ಉಪ್ಪಾರ್ ಬಿಡುಗಡೆಗೊಳಿಸಿದ್ರು.

ಬಳಿಕ ಮಾತನಾಡಿದ ಅವರು, ಗ್ರಾಹಕರ ಆಸೆ ಅಭಿಲಾಶೆಗಳನ್ನು ನಾವು ಈಡೇರಸಿದಾಗ ಮಾರುಕಟ್ಟೆಯಲ್ಲಿ ಗ್ರಾಹಕರು ಉತ್ಪನ್ನಗಳನ್ನ ಖರೀದಿಸ್ತಾರೆ. ಈ ನಿಟ್ಟಿನಲ್ಲಿ ಸುಪ್ರೀಂ ಸಂಸ್ಥೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ತಮ ಸೇವೆ ನೀಡ್ತಾ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.ಈ ಮೇಳದಲ್ಲಿ ಅನೇಕ ಫೈನಾನ್ಸ್ ಕಂಪೆನಿಗಳು ದ್ವಿಚಕ್ರ ವಾಹನಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅತೀ ಕಡಿಮೆ ಮುಂಗಡ ಪಾವತಿ, ಅತೀ ಕಡಿಮೆ ಸರಳಬಡ್ಡಿ, ಹಾಗೂ ಈಸಿ ಇನ್ಸ್ಟಾಲ್‌ಮೆಂಟ್‌ನೊಂದಿಗೆ ಅತೀ ಹೆಚ್ಚು ತಿಂಗಳ ಕಂತಿನೊಂದಿಗೆ ಲಭ್ಯವಿದೆ ಎಂದು ಡೆಪ್ಯುಟ್ ಸೇಲ್ಸ್ ಮ್ಯಾನೇಜರ್ ಕೆಸಿ ಹರೀಶ್ಚಂದ್ರನ್ ತಿಳಿಸಿದ್ರು.ಈಗಾಗಲೇ ರಶಿಯಾ ಮತ್ತು ಅರ್ಜೆಂಟಿಯಾದಿಂದ ಮಲೇಶಿಯಾ ಮತ್ತು ಮೆಕ್ಸಿಕೋದವರೆಗೆ ವರ್ಲ್ಡ್ ಫೇವರೆಟ್ ಇಂಡಿಯನ್ ಎಂಬ ಹೆಗ್ಗಳಿಕೆಯ ಬಜಾಜ್ ಆಟೋ, 70ರಾಷ್ಟ್ರಗಳಲ್ಲಿ ಕೋಟ್ಯಾಂತರ ಜನರ ಪ್ರೀತಿಗೆ ಪಾತ್ರವಾಗಿದೆ. ಈ ಜಾಗತಿಕ ಪರಿವಾರಕ್ಕೆ ಈಗ ಎರಡು ಹೊಸ ಬೈಕ್‌ಗಳು ಕೂಡಾ ಸೇರ್ಪಡೆಯಾಗ್ತಾ ಇದೆ.

ಪ್ಲಾಟಿನಾ ಹೆಚ್ ಗೇರ್ 110 ಬೈಕ್ ವಿಶೇಷವಾದ ಹೈವೇ ಗೇರ್, ಆಧುನಿಕ ಗೇರ್ ಶಿಫ್ಟ್ ಮತ್ತು ಸ್ಮೂತ್ ಗೇರ್ ಶಿಫ್ಟ್‌ಗಳನ್ನು ಒಳಗೊಂಡಿದೆ. ಕ್ವಿಲ್ಟ ಸ್ಟಿಚ್ ಡಿಸೈನ್‌ಗಳ ಉದ್ದನೆಯ ಹಾಗೂ ಅಗಲವಾದ ಸೀಟ್‌ಗಳಿದ್ದು ರೈಡರ್ ಸಂಗಡ ಹಿಂದೆ ಕುಳಿತ ಸವಾರರಿಗೂ ಆರಾಮದಾಯಕ ಪ್ರಯಾಣ.. ಇನ್ನು ಇದರ ಡಿಟಿಎಸ್-ಐ ಇಂಜಿನ್ ಒಳ್ಳೆಯ ಪಿಕ್‌ಅಪ್ ಹಾಗೂ ಉತ್ತಮ ಮೈಲೇಜ್‌ನ್ನು ನಿಡುತ್ತೆ. ನೈಟ್ರಾಕ್ಸ್ ಗ್ಯಾಸ್‌ನೊಂದಿಗೆ ಸ್ಪ್ರಿಂಗ್ ಆನ್‌ಸ್ಪ್ರಿಂಗ್ ಸಸ್ಪೆನ್ಶನ್ ನೀಡುತ್ತದೆ. ಹಾಗೆಯೇ ಆಂಟಿ-ಸಿಡ್ ಬ್ರೇಕಿಂಗ್ ಸಿಸ್ಟಮ್, ಟ್ಯೂಬ್‌ಲೆಸ್ ಟೈರ್‍ಸ್‌ಗಳನ್ನು ಈ ಬೈಕ್ ಹೊಂದಿದೆ.

ಇನ್ನು ಸಿಟಿ110 ಬಲಿಷ್ಟವಾಗಿದ್ದು, ಶಕ್ತಿಶಾಲಿ ಇಂಜಿನ್, ಸದೃಢ ನಿರ್ಮಾಣ ಮತ್ತು ಹೊಚ್ಚಹೊಸ ಸೆಮಿ-ನಾಬಿ ಟೈರ್‌ಗಳಿಂದ ಯಾವುದೇ ಕಠಿಣ ರಸ್ತೆಗಳಲ್ಲೂ ಮುನ್ನುಗ್ಗುವುದರೊಂದಿಗೆ ರಸ್ತೆಗಳನ್ನಾಳುವ ಗಂಡುಗಲಿ ಅನಿಸಿಕೊಂಡಿದೆ. ಹೆಚ್ಚು ಖಡಕ್ ಹಾಗೂ ಹೆಚ್ಚು ವಿಶಾಲ ಕ್ರ್ಯಾಶ್ ಗಾರ್ಡ್ಸ್, ಅಪ್‌ಸ್ವೆಟ್ ಎಕ್ಸಾಸ್ಟ್, 170ಎಮ್‌ಎಮ್‌ನ ಅಧಿಕ ಎತ್ತರ ಗ್ರೌಂಡ್ ಕ್ಲಿಯರೆನ್ಸ್, ರಬರ್ ಮಿರರ್ ಕವರ್ಸ್, ಫ್ರಂಟ್ ಸಸ್ಪೆಂಶನ್ ಮೇಲೆ ಬೆಲೋಜ್, ರೆಕ್ಸಿನ್ ಫ್ಯಾಬ್ರಿಕ್‌ನೊಂದಿಗೆ ದಪ್ಪ ಮತ್ತು ಮೃದುವಾದಂತಹ ಸೀಟ್‌ಗಳನ್ನು ಈ ಬೈಕ್ ಹೊಂದಿದೆ.ಒಟ್ಟಿನಲ್ಲಿ ಸುಪ್ರೀಂ ಸಂಸ್ಥೆಯು ಎರಡು ನೂತನ ಬೈಕ್‌ಗಳನ್ನು ಪರಿಚಯಿಸಿದ್ದು, ಗ್ರಾಹಕರ ಸದಭಿರುಚಿಗೆ ತಕ್ಕ ಹಾಗೇ ಸೇವೆ ಮಾಡ್ತಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Related posts

Leave a Reply

Your email address will not be published. Required fields are marked *