Header Ads
Header Ads
Header Ads
Header Ads
Header Ads
Header Ads
Breaking News

ಸುರತ್ಕಲ್‌ನ ಗುಡ್ಡೆಕೊಪ್ಲದಲ್ಲಿರುವ ಬಬ್ಬರ್ಯ ಮತ್ತು ಬಬ್ಬರ್ಯ ಬಂಟ ದೈವಗಳ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ

ಸುರತ್ಕಲ್‌ನ ಗುಡ್ಡೆಕೊಪ್ಲದಲ್ಲಿರುವ ಬಬ್ಬರ್ಯ ಮತ್ತು ಬಬ್ಬರ್ಯ ಬಂಟ ದೈವಗಳ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವು ವೇದಮೂರ್ತಿ ಕಮಲಾ ದೇವಿ ಪ್ರಸಾದ ಅಸ್ರಣ್ಣ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ಸುರತ್ಕಲ್‌ನ ಗುಡ್ಡೆಕೊಪ್ಲದಲ್ಲಿರುವ ಬಬ್ಬರ್ಯ ದೈವಸ್ಥಾನ ಜೀರ್ಣೋದ್ದಾರಗೊಳ್ಳಲಿದ್ದು, ಬಬ್ಬರ್ಯ ಬಂಟ ದೈವಗಳ ಗರ್ಭಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ವೇದಮೂರ್ತಿ ಕಮಲಾ ದೇವಿ ಪ್ರಸಾದ ಅಸ್ರಣ್ಣ ಅವರು ಹಾಲು ಎರೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿದರು. ಆನಂತರ ನಡೆದ ಸಭಾ ಕಾರ್ಯಕ್ರಮವನ್ನು ವೇದಮೂರ್ತಿ ಕಮಲಾ ದೇವಿ ಪ್ರಸಾದ ಅಸ್ರಣ್ಣ ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ಅವರು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು.

ಇದೇ ವೇಳೆ ವೇದಮೂರ್ತಿ ಕಮಲಾ ದೇವಿ ಪ್ರಸಾದ ಅಸ್ರಣ್ಣ ಅವರು ಅಶೀರ್ವಚನ ನೀಡಿದರು.
ಆನಂತರ ಯಶ್‌ಪಾಲ ಸುವರ್ಣ ಅವರು ಮಾತನಾಡಿ, ಕರಾವಳಿ ಭಾಗದಲ್ಲಿರುವವರ ಧಾರ್ಮಿಕ ನಂಬಿಕೆ ಬೇರೆ ಯಾವ ಭಾಗದಲ್ಲಿಯೂ ಕಾಣಸಿಗುವುದಿಲ್ಲ. ಮೀನುಗಾರರ ಪ್ರಧಾನ ಅರಾಧ್ಯ ದೈವ ಬಬ್ಬರ್ಯ ದೈವಸ್ಥಾನ ಗುಡ್ಡೆಕೊಪ್ಲದಲ್ಲಿ ಜೀರ್ಣೋದ್ದಾರಗೊಂಡು ಆಕರ್ಷಣೆಗೊಳ್ಳಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಬ್ಬರ್ಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಪುಂಡಲೀಕ ಹೊಸಬೆಟ್ಟು ಅವರು ಮಾತನಾಡಿ, ಗುಡ್ಡೆಕೊಪ್ಲದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಬಬ್ಬರ್ಯ ದೈವಸ್ಥಾನಕ್ಕೆ ಗುಡ್ಡೆಕೊಪ್ಲ ಮೊಗವೀರ ಸಮಾಜ ಬಾಂಧವರು ಸಹಕಾರ ನೀಡಿದ್ದಾರೆ. ಬಬ್ಬರ್ಯನ ದೈವಸ್ಥಾನ, ಧ್ವಜಸ್ತಂಭ, ಭದ್ರತಾ ಕೊಠಡಿ, ಸಮುದಾಯ ಭವನ, ನಾಗನಗುಡಿ, ಆವರಣಗೋಡೆ, ಸುತ್ತುಪೌಳಿ ಇದಕ್ಕೆಲ್ಲಾ ಸುಮಾರು ಒಂದೂವರೆಕೋಟಿ ಅಂದಾಜು ವೆಚ್ಚದ ಈ ಕಾರ್ಯಕ್ರಮಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಸುವರ್ಣ, ವಿ. ಸೂರ್ಯನಾರಾಯಣ, ಮಂಗಳೂರಿನ ಕಾಂಚನ ಹುಂಡೈನ ಆಡಳಿತನ ನಿರ್ದೇಶಕರಾದ ಪ್ರಸಾದ್ ರಾಜ್ ಕಾಂಚನ್, ಮೋಹನ್ ಬೆಂಗ್ರೆ, ಮಾಜಿ ಶಾಸಕ ಮೊಯ್ದಿನ್ ಬಾವಾ, ಗುಡ್ಡೆಕೊಪ್ಲ ಮೊಗವೀರ ಸಂಘದ ಅಧ್ಯಕ್ಷರಾದ ಕೇಶವ ಕುಂದರ್, ಗುಡ್ಡೆಕೊಪ್ಲ ಮೊಗವೀರ ಮಹಾಸಭಾ ಮುಂಬಯಿ ಅಧ್ಯಕ್ಷರಾದ ನರೇಂದ್ರ ಕರ್ಕೇರ, ಬಬ್ಬರ್ಯ ದೈವಸ್ಥಾನ ಜೋರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಉದಯ್ ಎಸ್. ಆಮೀನ್, ಪ್ರವೀಣ್ ಸಾಲ್ಯಾನ್ ಮತ್ತು ಬಬ್ಬರ್ಯ ದೈವಸ್ಥಾನ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಹಾಗೂ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *