Header Ads
Header Ads
Breaking News

ಸುಳ್ಯದಲ್ಲಿ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಸಮಗ್ರ ಕೃಷಿ ಅಭಿಯಾನ

ಕೃಷಿ ಕ್ಷೇತ್ರ ಇವತ್ತು ನಮ್ಮಿಂದ ದೂರವಾಗುತ್ತಿದೆ. ಯುವ ಸಮುದಾಯ ಕೃಷಿ ಕ್ಷೇತ್ರ ಬಿಟ್ಟು ನಗರ ಸೇರುತ್ತಿದ್ದಾರೆ. ಕೃಷಿ ಕಾರ್ಮಿಕರ ಕೊರತೆಗಳ ಮಧ್ಯೆ ವೈಜ್ಞಾನಿಕವಾಗಿ ಯುವಕರು ಕೃಷಿಯ ಬಗ್ಗೆ ಆಕರ್ಷಣೆ ಹೆಚ್ಚಾಗುವಂತೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ ಹೇಳಿದರು.ಜಿಲ್ಲಾ ಪಂಚಾಯಿತಿ ಹಾಗೂ ಸುಳ್ಯ ಕೃಷಿ ಇಲಾಖೆ ಇದರ ಆಶ್ರಯದಲ್ಲಿ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಜಿ.ಪಂ.ಸದಸ್ಯ ಎಸ್.ಎನ್.ಮನ್ಮಥ ಕೃಷಿಗೆ ಸಂಬಂಧಪಟ್ಟ ಕರಪತ್ರವನ್ನು ಬಿಡುಗಡೆಮಾಡಿ ಮಾತನಾಡಿ ಸರಕಾರದ ಹಲವು ಕೃಷಿ ಯೋಜನೆಗಳು ರೈತರಿಗೆ ತಲುಪಬೇಕು. ಕಚೇರಿಗಳಿಗೆ ರೈತರು ಬಂದಾಗ ಸೂಕ್ತವಾದ ಮಾಹಿತಿಗಳನ್ನು ನೀಡಬೇಕು.

 

ಕೃಷಿ ವಿಮೆಯಂತಹ ಯೋಜನೆಗಳು ಕೃಷಿಕರಿಗೆ ಭದ್ರತೆಯನ್ನು ನೀಡುತ್ತದೆ ಎಂದು ಹೇಳಿದರು. ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಎಪಿಎಂಸಿ ಉಪಾಧ್ಯಕ್ಷೆ ಸುಕನ್ಯಾ ಭಟ್, ನಿರ್ದೇಶಕರಾದ ಸಂತೋಷ್ ಜಾಕೆ, ಜಯಲಕ್ಷ್ಮೀ ಚಿಕ್ಮುಳಿ, ತಾಲೂಕು ಪಂಚಾಯಿತಿ ಸದಸ್ಯೆ ಪುಷ್ಪಾಮೇದಪ್ಪ ಭಾಗವಹಿಸಿದರು. ವೇದಿಕೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಆಂಟನಿ ಮರಿಯಾಸ್, ಉಪನಿರ್ದೇಶಕ ಶಿವಶಂಕರ್, ಸುಳ್ಯ ತಾಲೂಕು ಕೃಷಿ ಅಧಿಕಾರಿ ಫಾಲಿಚಂದ್ರ, ತಾಂತ್ರಿಕ ಕೃಷಿ ಅಧಿಕಾರಿ ಮೋಹನ್ ನಂಗಾರು ಇದ್ದರು.

Related posts

Leave a Reply