Header Ads
Header Ads
Breaking News

ಸುಳ್ಯದಲ್ಲಿ ಕಾಂಗ್ರೆಸ್ ನಾಯಕಿ ಬಿಜೆಪಿ ಸೇರ್ಪಡೆ

ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ನಾಯಕಿ ಹಾಗೂ ಮಂಡೆಕೋಲು ಗ್ರಾ.ಪಂ. ಸದಸ್ಯೆ ಶ್ರೀಮತಿ ವಿನುತಾ ಪಾತಿಕಲ್ಲು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಪಕ್ಷದ ಕಛೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಕೇವಲ ರಾಜಕೀಯಕ್ಕೋಸ್ಕರ ಬಿಜೆಪಿಗೆ ಸೇರಿಲ್ಲ. ಅಭಿವೃದ್ಧಿ ಮತ್ತು ಸಾಮಾಜಿಕ ದೃಷ್ಟಿಕೋನದಿಂದ ಪಕ್ಷ ಸೇರಿದ್ದೇನೆ. ಪ್ರಧಾನಿ ನರೇಂದ್ರಮೋದಿಯವರು ಹಮ್ಮಿಕೊಂಡಿರುವ ಯೋಜನೆಗಳು ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸಿದ್ದು, ಇದರಿಂದ ಪ್ರೇರಿತನಾಗಿ ಬಿಜೆಪಿ ಸೇರಿದ್ದೇನೆ ಎಂದು ಹೇಳಿದರು.
ಬಿಜೆಪಿ ಸೇರ್ಪಡೆ ದಿಢೀರ್ ಬೆಳವಣಿಗೆಯಲ್ಲ. ಕಳೆದ 6 ತಿಂಗಳಿನಿಂದ ಈ ಕುರಿತು ಚಿಂತನೆ ನಡೆಸುತ್ತಿದ್ದೆ. ನಾನು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷತೆಗೆ ೨ ಬಾರಿ ಆಕಾಂಕ್ಷಿಯಾಗಿದ್ದೆ. ಆದರೆ ಕೆಲವರು ನನಗೆ ಅವಕಾಶ ತಪ್ಪಿಸಿದರು. ಬಿಜೆಪಿ ಸೇರ್ಪಡೆಯ ಸಂದರ್ಭದಲ್ಲಿ ಯಾವುದೇ ಹುದ್ದೆಯ ಬೇಡಿಕೆ ಇರಿಸಿಲ್ಲ. ಪಕ್ಷ ಬಿಡುವ ನನ್ನ ತೀರ್ಮಾನವನ್ನು ಕೆಲವು ಸಮಯದ ಹಿಂದೆಯೇ ಬ್ಲಾಕ್ ಅಧ್ಯಕ್ಷರ ಗಮನಕ್ಕೆ ತಂದಿದ್ದೆ ಎಂದು ವಿನುತಾ ಪಾತಿಕಲ್ಲು ಹೇಳಿದರು.
ವಿನುತಾ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಹೆಚ್ಚಿನ ಬಲ ಬಂದಿದೆ ಎಂದು ಬಿಜೆಪಿ ಮಂಡಲ ಸಮಿತಿ ಕಾರ್ಯದಶಿ ಸುಬೋಧ್ ಶೆಟ್ಟಿ ಮೇನಾಲ ಹೇಳಿದರು.
ಪಕ್ಷದ ಮುಖಂಡರಾದ ನವೀನ್ ರೈ ಮೇನಾಲ, ಚನಿಯ ಕಲ್ತಡ್ಕ, ಜಯರಾಜ್ ಕುಕ್ಕೆಟ್ಟಿ, ಶೈಲೇಶ್ ಅಂಬೆಕಲ್ಲು, ಉದಯಕುಮಾರ್ ಆಚಾರ್, ಸುರೇಶ್ ಕಣೆಮರಡ್ಕ, ಮಹೇಶ್ ರೈ ಮೇನಾಲ, ಸುದರ್ಶನ ಪಾತಿಕಲ್ಲು, ಚಂದ್ರಜಿತ್ ಮಾವಂಜಿ, ಸುಂದರ ಕಾಡುಸೊರಂಜ, ಚಂದ್ರಕೋಲ್ಚಾರ್ ಮೊದಲಾದವರು ಉಪಸ್ಥಿತರಿದ್ದರು.