Header Ads
Breaking News

ಸುಳ್ಯದಲ್ಲಿ ಕೈತೋಟ ಅಭಿವೃದ್ದಿ ತರಬೇತಿ ಕಾರ್ಯಕ್ರಮ

ವಿಷಯುಕ್ತ ತರಕಾರಿಗಳ ಸೇವನೆಯಿಂದ ನಮ್ಮ ದೇಹ ವಿಷಯುಕ್ತವಾಗಿದೆ. ನಮ್ಮ ಆಹಾರಕ್ಕಾಗಿ ನಮ್ಮಲ್ಲೇ ಸಾವಯವ ತರಕಾರಿಗಳನ್ನು ಬೆಳೆಸುವುದರಿಂದ ಆರೋಗ್ಯದ ದೃಷ್ಟಿಯಿಂದ ಮನುಷ್ಯನ ಆಯುಷ್ಯ ವೃದ್ದಿಗೆ ಕೈತೋಟಗಳು ಸಹಕಾರಿ ಆಗುತ್ತಿದೆ ಎಂದು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು.

ಅವರು ಸುಳ್ಯದ ಲಯನ್ಸ್ ಕ್ಲಬ್‍ನಲ್ಲಿ ತೋಟಗಾರಿಕೆ ಇಲಾಖೆ ಸುಳ್ಯ ಹಾಗೂ ಲಯನ್ಸ್ ಕ್ಲಬ್ ಇದರ ಆಶ್ರಯದಲ್ಲಿ ನಡೆದ ಕೈತೋಟ ಅಭಿವೃದ್ದಿ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಯುಗದ ಜಂಜಾಟದಲ್ಲಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡುತ್ತಿದ್ದೇವೆ. ಪೇಟೆಯಲ್ಲಿ ಸಿಗುವ ವಿಷಯುಕ್ತ ತರಕಾರಿಗಳನ್ನು ತಂದು ತಿನ್ನುತ್ತಿದ್ದೇವೆ. ಮನೆಯ ಬಳಿಯಲ್ಲಿ ತರಕಾರಿ ತೋಟಗಳನ್ನು ಮಾಡಲು ನಮಗೆ ಸಮಯ ಇಲ್ಲ. ಈ ಎಲ್ಲಾ ಕಾರಣದಿಂದ ನಮ್ಮ ಆರೋಗ್ಯ ಮತ್ತು ಆಯುಷ್ಯ ಕಡಿಮೆ ಆಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾರಸಿ ತೋಟ ಕೃಷಿ ತಜ್ಞ ಕೃಷ್ಣಪ್ಪ ಗೌಡ ಪಡ್ಡಂಬೈಲು ಅವರಿಂದ ಕೈತೋಟ ರಚನೆ ಮತ್ತು ಅಭಿವೃದ್ದಿಯ ಬಗ್ಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ರೇಣುಕಾ ಸದಾನಂದ ಜಾಕೆ, ಸಹಾಯಕ ತೋಟಗಾರಿಕೆ ಅಧಿಕಾರಿ ಅರಬನ್ ಪೂಜಾರಿ, ನಿವೃತ್ತ ಕೃಷಿ ಅಧಿಕಾರಿ ವೀರಪ್ಪ ಗೌಡ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *