Header Ads
Breaking News

ಸುಳ್ಯದಲ್ಲಿ ರಂಗಸಂಭ್ರಮ-2020 ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ

ರಂಗಮನೆಯಂತಹ ಚಟುವಟಿಕೆ ಕೇಂದ್ರಗಳು ಪ್ರತಿಭೆಗಳಿಗೆ ವೇದಿಕೆಗಳನ್ನು ನೀಡುವ ಮೂಲಕ ಅವಕಾಶ ನೀಡುತ್ತಿದೆ. ಒಬ್ಬ ವ್ಯಕ್ತಿ ರಂಗ ಕಲೆಗಳನ್ನು ಒಂದು ತ್ಯಾಗದ ರೂಪದಲ್ಲಿ ತೆಗೆದುಕೊಂಡಾಗ ಕಲಾವಿದನಲ್ಲಿರುವ ಶಕ್ತಿ ಹೊರಹೊಮ್ಮಿ ಕಲಾವಿದನಲ್ಲಿ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ವೃದ್ದಿಸಲು ಸಹಕಾರಿ ಆಗುತ್ತದೆ ಎಂದು ಪುತ್ತೂರು ಸಹಾಯಕ ಕಮಿಷನರ್ ಡಾ. ಯತೀಶ್ ಉಳ್ಳಾಲ್ ಹೇಳಿದರು.

ಅವರು ಸುಳ್ಯ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ನಡೆಯುತ್ತಿರುವ ರಂಗಸಂಭ್ರಮ-2020 ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ, ಚಲನಚಿತ್ರ ನಿರ್ದೇಶಕ ಎನ್.ಎಸ್.ದೇವಿಪ್ರಸಾದ್ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜು ಕುಸುಮಸಾರಂಗದ ಸಂಚಾಲಕ ಡಾ.ಗೋವಿಂದ ಎನ್.ಎಸ್., ರಂಗಮನೆಯ ರೂವಾರಿ ಜೀವನ್ ರಾಂ ಸುಳ್ಯ, ಡಾ.ಸುಂದರ ಕೇನಾಜೆ, ನ್ಯಾಯವಾದಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಬಳಿಕ ಬಹುಮುಖ ಪ್ರತಿಭೆ ಕು.ರಚನಾ ನರಿಯೂರು ಇವರಿಂದ ಭರತನಾಟ್ಯ ಮತ್ತು ಪಾದುವಾ ರಂಗ ಅಧ್ಯಯನ ಕೇಂದ್ರ ಮಂಗಳೂರು ಅಭಿನಯಿಸಿದ ವಿಭಿನ್ನ ಕನ್ನಡ ನಾಟಕ ಕೆಂಡೋನಿಯನ್ಸ್ ಪ್ರದರ್ಶನಗೊಂಡಿತು.

Related posts

Leave a Reply

Your email address will not be published. Required fields are marked *