Header Ads
Header Ads
Header Ads
Header Ads
Header Ads
Header Ads
Breaking News

ಸುಳ್ಯದಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆ

ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪದಂತಹ ಘಟನೆಗಳು ಸಂಭವಿಸಿದ ತಕ್ಷಣ ಮಾಹಿತಿ ನೀಡಿ. ವಿಪತ್ತುಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ತಾಲೂಕು ಆಡಳಿತ ದಿನದ 24 ಗಂಟೆಯು ಸನ್ನಧ ಆಗಿದೆ. ಇದಕ್ಕೆ ಸಾರ್ವಜನಿಕರ ಮತ್ತು ಸಂಘಸಂಸ್ಥೆಗಳ ಸಹಕಾರ ಬೇಕು ಎಂದು ಸುಳ್ಯ ತಹಶೀಲ್ದಾರ್ ಕುಂಞಿ ಆಹಮ್ಮದ್ ಹೇಳಿದರು.ಅವರು ಸುಳ್ಯ ತಾಲೂಕು ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು. ಅವಘಡಗಳು ಸಂಭವಿಸಿದರೆ ಆ ಸಂದರ್ಭದಲ್ಲಿ ಅಲ್ಲಿದ್ದವರು ಜೋಶ್ ತೋರಿಸುವ ಬದಲು ಹೆಚ್ಚು ಅವಘಡ, ಹಾನಿ ಸಂಭವಿಸದಂತೆ ನೋಡಿಕೊಳ್ಳಿ. ಜೋಶ್‌ನಲ್ಲಿ ಮುನ್ನುಗ್ಗಿದರೆ ಕೆಲವು ಸಂದರ್ಭ ಆಪತ್ತು ಹೆಚ್ಚಾಗುವ ಸಂದರ್ಭ ಹೆಚ್ಚಿರುತ್ತದೆ. ಇದಕ್ಕೆ ಮೊದಲೇ ಜಾಗರೂಕರಾಗಿರಬೇಕು ಎಂದು ಸುಳ್ಯ ಠಾಣಾ ಎಸ್.ಐ ಹರೀಶ್ ಕುಮಾರ್ ಹೇಳಿದರು.ತುಂಬಾ ಅಪಾಯಕಾರಿಯಾಗಿರುವ ಸಣ್ಣ ಮರಗಳನ್ನು ಕಡಿರಿ. ದೊಡ್ಡ ಮರಗಳಿಗೆ ಪರವಾನಿಗೆ ಅಗತ್ಯ. ವಿದ್ಯುತ್ ತಂತಿಗಳ ಮೇಲೆ ಹಾದು ಹೋಗುವ ಮರದ ಗೆಲ್ಲುಗಳನ್ನು ಕಡಿಯಲು ಪರವಾನಿಗೆಯ ಅಗತ್ಯ ಇಲ್ಲ. ಆದರೆ ಇದನ್ನೇ ನೆಪ ಮಾಡಿಕೊಂಡು ಮರಗಳನ್ನು ಕಡಿಯುವ ಕೆಲಸ ಮಾಡಬೇಡಿ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್. ಮಂಜುನಾಥ್ ಹೇಳಿದರು.

ನದಿ ಬದಿಯಲ್ಲಿರುವ ಶಾಲೆಗಳ ಕಡೆಗೂ ಗಮನ ಹರಿಸಿ ಎಂದು ತಹಶೀಲ್ದಾರ್ ಇದೇ ಸಂದರ್ಭದಲ್ಲಿ ಹೇಳಿದರು.ಸಭೆಯಲ್ಲಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ, ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ವಲಯ ಅರಣ್ಯಾಧಿಕಾರಿ ಮಂಜುನಾಥ್. ಎನ್, ಮೆಸ್ಕಾಂ ಎ.ಇ ಸುಪ್ರೀತ್, ನಗರ ಪಂಚಾಯತ್ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು, ಪ್ರಮುಖರಾದ ನ್ಯಾಯವಾದಿ ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *