Header Ads
Header Ads
Breaking News

ಸುಳ್ಯ : ಕಂದಾಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

ಪ್ರತಿಯೊಬ್ಬ ಜನ ಸಾಮಾನ್ಯನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕಂದಾಯ ಮತ್ತು ಪಿಂಚಣಿ ಅದಾಲತ್‍ಗಳನ್ನು ನಡೆಸಬೇಕು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ.

ಅವರು ಸುಳ್ಯ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಸಿ ಮಾತನಾಡಿದರು ಕಂದಾಯ ಅದಾಲತ್‍ಗಳು ಕಾಟಾಚಾರಕ್ಕೆ ನಡೆಸುವ ಕಾರ್ಯಕ್ರಮವಾಗಬಾರದು. ದೂರು ನೀಡಲು ಬರುವ ಜನ ಸಾಮಾನ್ಯನ ಸಮಸ್ಯೆಗಳು ಅದಾಲತ್‍ನಲ್ಲಿ ಬಗೆಹರಿಯಬೇಕು. ಮುಂದಿನ ತಿಂಗಳಲ್ಲಿ ಅದಾಲತ್ ನಡೆಸಬೇಕು. ಪಿಂಚಣಿದಾರರು, ಸಂಧ್ಯಾಸುರಕ್ಷ ಅದಾಲತ್‍ಗಳನ್ನು ನಡೆಸಬೇಕು. ಅದಾಲತ್‍ಗೆ ನಾನು ಕೂಡ ಬರುತ್ತೇನೆ ಸಮರ್ಪಕವಾಗಿ ಜನರ ಸಮಸ್ಯೆಗಳು ನಿವಾರಣೆ ಆಗಬೇಕು ಎಂದು ಹೇಳಿದರು.

ಮಳೆಗಾಲ ಆರಂಭವಾಗುತ್ತಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸ ದುರ್ಘಟನೆಗಳು ಆಗದ ಹಾಗೆ ತಾಲೂಕು ಆಡಳಿತ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕು. ಪ್ರಾಕೃತಿಕ ವಿಕೋಪಕ್ಕೆ ಸರಕಾರ ಈಗಾಗಲೇ 6 ಕೋಟಿ ಬಿಡುಗಡೆ ಮಾಡಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಾಗುವುದು ಹಾಗೂ ತಾಲೂಕು ಆಡಳಿತ ಯಾವ ರೀತಿ ಸಿದ್ದತೆ ಮಾಡಿಕೊಂಡಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಕಳೆದ ಬಾರಿ ಸಂಭವಿಸಿದ ಪಾಕೃತಿಕ ವಿಕೋಪದಲ್ಲಿ ತಾಲೂಕಿನಲ್ಲಿ ಹಲವು ಕಡೆ ಮನೆಗಳು ನಾಶವಾಗಿದೆ. ಆದರೆ ಅಂತಹ ಕುಟುಂಬಗಳಿಗೆ 90000 ನೀಡಿದೆ. ಇತಂಹ ಕುಟುಂಬಗಳಿಗೆ ಅನ್ಯಾಯ ಆಗಿದೆ. ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ವರದಿ ಮಾಡುವಾಗ ಮಾನವೀಯತೆಯ ನೆಲೆಯಲ್ಲಿ ವರದಿ ಮಾಡಬೇಕು ಎಂದು ಶಾಸಕ ಅಂಗಾರ ಹೇಳಿದರು.

ತಾಲೂಕಿನಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿದರೆ ಕೂಡಲೇ ಮಾಹಿತಿ ನೀಡುವಂತಹ ಆ್ಯಪ್‍ವೊಂದನ್ನು ಸಿದ್ದಪಡಿಸ. ಇದರಿಂದ ದೂರದ ಪ್ರದೇಶಗಳಿಗೆ ಕಡಿಮೆ ಸಮಯದಲ್ಲಿ ಪರಿಹಾರ ಮತ್ತು ಸಮಸ್ಯೆಗಳ ಬಗ್ಗೆ ತಿಳಿಸಲು ಸಹಾಯವಾಗುತ್ತದೆ ಎಂದು ಐವನ್ ಡಿಸೋಜಾ ಹೇಳಿದರು.
ಸಭೆಯಲ್ಲಿ ಶಾಸಕ ಎಸ್. ಅಂಗಾರ, ಸಹಾಯಕ ಕಮಿಷನರ್ ಕೃಷ್ಣಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಹಶೀಲ್ದಾರ್ ಕುಂಞÂ ಅಹಮ್ಮದ್, ಜಿ.ಪಂ ಸದಸ್ಯೆ ಪುಪ್ಪಾವತಿ ಬಾಳಿಲ, ತಾ.ಪಂ ಉಪಾಧ್ಯಕ್ಷೆ ಶುಭದಾ ಎಸ್ ರೈ, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾದಾಕೃಷ್ಣ ಬೊಳ್ಳೂರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *