Header Ads
Header Ads
Breaking News

ಸುಳ್ಯ ಡಾ. ಪ್ರಭಾಕರ ಶಿಶಿಲರ ವ್ಯವಹಾರ ಅರ್ಥಶಾಸ್ತ್ರ ಕೃತಿ ಬಿಡುಗಡೆ

ಜ್ಞಾನ, ಪ್ರತಿಭೆಗಳು ಹುಟ್ಟಿನಿಂದ ಬರುವಂತದಲ್ಲ. ಪುಸ್ತಕಗಳನ್ನು ಓದುವ ಮೂಲಕ ಇವುಗಳನ್ನು ಪಡೆಯಬೇಕು. ಯುವಜನತೆ ಹಣ ಸಂಪಾದನೆಯ ಬದಲು ಪುಸ್ತಕ ಓದುವ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ, ಲೇಖಕ ಡಾ. ಪ್ರಭಾಕರ ಶಿಶಿಲ ಹೇಳಿದರು.

ಸುಳ್ಯ ಶಾರದಾ ಮಹಿಳಾ ಕಾಲೇಜಿನಲ್ಲಿ ನಡೆದ ಡಾ. ಪ್ರಭಾಕರ ಶಿಶಿಲರ 165ನೇ ಕೃತಿ ವ್ಯವಹಾರ ಅರ್ಥಶಾಸ್ತ್ರ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಮಾತೃಭಾಷೆಯ ಶಿಕ್ಷಣ ಅಗತ್ಯ. ವಿದ್ಯಾರ್ಥಿಗಳಿಗೆ ಕನ್ನಡದಲ್ಲಿಯೇ ಕಲಿಸುವ ಅಗತ್ಯ ಇದೆ. ಅದರೊಂದಿಗೆ ಸಂವಹನಕ್ಕಾಗಿ ಇಂಗ್ಗಿಷ್‍ನ್ನು ಕಲಿಯುವ ಅಗತ್ಯ ಇದೆ. ವಿದ್ಯಾರ್ಥಿಗಳಿಗೆ ವಿಷಯ ಅರ್ಥಮಾಡಿಕೊಳ್ಳಲು ಕನ್ನಡವೇ ಬಹಳ ಉತ್ತಮ ಎಂದು ಅನಿಸಿದ ಕಾರಣ ಕನ್ನಡದಲ್ಲಿ ಅರ್ಥಶಾಸ್ತ್ರ ಪುಸ್ತಕಗಳನ್ನು ಬರೆಯಲು ಆರಂಭಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಪ್ರಯೋಜನಕಾರಿ ಆಗಿದೆ ಎಂದರು.

ಡಾ. ಶಿಶಿಲರ 165ನೇ ಕೃತಿ ವ್ಯವಹಾರ ಅರ್ಥಶಾಸ್ತ್ರವನ್ನು ಗೌಡ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಜೋತ್ಸ್ನಾ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರೇವತಿ ನಂದನ್, ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *