Header Ads
Header Ads
Breaking News

ಸುಳ್ಯ ತಾಲೂಕಿನಲ್ಲಿ ನಿರಂತರ ವಿದ್ಯುತ್ ಕಣ್ಣಮುಚ್ಚಾಲೆ

ಮಳೆಗಾಲ ಆರಂಭವಾದಂತೆ ಸುಳ್ಯ ತಾಲೂಕಿನಾದ್ಯಂತ ಬೆಳ್ಳಾರೆ ಸೇರಿದಂತೆ ಇತರ ಭಾಗದಲ್ಲಿ ನಿರಂತರ ವಿದ್ಯುತ್ ಕಣ್ಣಮುಚ್ಚಾಲೆಯಾಗಿ, ಗ್ರಾಮೀಣ ಪ್ರದೇಶಗಳು ಕಳೆದ ಒಂದು ವಾರದಿಂದ ಕತ್ತಲೆಯಲ್ಲಿದೆ.ಒಂದು ವಾರಗಳಿಂದ ಸುಳ್ಯ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಸುಳ್ಯ ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಂದರಲ್ಲಿ ವಿದ್ಯುತ್ ಸಮಸ್ಯೆಯದ್ದೆ ಕೂಗು. ಹಗಲು ರಾತ್ರಿ ಎನ್ನದೆ ನಿರಂತರ ಮಾಯವಾಗುವ ವಿದ್ಯುತ್ ಒಮ್ಮೆ ಹೋದ ವಿದ್ಯುತ್ ಮತ್ತೆ ಬರುತ್ತದೆ ಎಂಬುದು ಖಾತ್ರಿ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿಯಂತೂ ಹಲವು ದಶಕಗಳ ಹಿಂದೆ ಉಪಯೋಗಿಸುತ್ತಿದ್ದ ಚಿಮಣಿ ದೀಪವನ್ನು ಜನರು ಉಪಯೋಗಿಸುತ್ತಿದ್ದಾರೆ.

ಮರ್ಕಂಜ, ಅಮರಮುಡ್ನೂರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ, ಬಾಳುಗೋಡು, ಕಂದ್ರಪ್ಪಾಡಿ, ಮಡಪ್ಪಾಡಿ, ಚೆಂಬು ಗ್ರಾಮದ ಪಟ್ಟಿ, ಕುದುರೆಪಾಯ, ಅಮೆಮನೆ, ಪೆರಾಜೆ, ಚೆಂಬು ಈ ಭಾಗಗಳಲ್ಲಿ ವಿದ್ಯುತ್ ಒಂದುವಾರಗಳಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿದೆ. ಸುಳ್ಯ ನಗರ ಸೇರಿದಂತೆ ಉಳಿದ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ಇದ್ದರೂ ಮಳೆ ಬಂದ ಕೂಡಲೇ ವಿದ್ಯುತ್ ಮಾಯವಾಗಿ ಬಿಡುತ್ತದೆ.ಈ ಎಲ್ಲ ಸಮಸ್ಯೆಗಳ ಮಧ್ಯೆ ಸುಳ್ಯ ಮೆಸ್ಕಾಂನ ಇಂಜಿನಿಯರ್ ಹರೀಶ್ ನೇತೃತ್ವದಲ್ಲಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ಕೆಲಸ ನಡೆಯುತ್ತಿದೆ. ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವಲ್ಲಿ ಜೆಇ ಹರೀಶ್ ಅವರೇ ಕಾರ್ಮಿಕರೊಂದಿಗೆ ಸೇರಿ, ವಿದ್ಯುತ್ ಗ್ರಾಹಕರಿಗೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ.
ಇದಕ್ಕೆಲ್ಲಾ ಮುಖ್ಯ ಕಾರಣ ತಾಲೂಕಿನ 2 ದಶಕಗಳ ಬೇಡಿಕೆಯಾದ110ಕೆ.ವಿ ಸಬ್ ಸ್ಟೇಷನ್ ಅನುಷ್ಠಾನಗೊಳ್ಳದೇ ಇರುವುದು. ಈಗ ಸಧ್ಯಕ್ಕೆ33 ಕೆ.ವಿ ಸಬ್ ಸ್ಟೇಷನ್ ಮೂಲಕ ವಿದ್ಯುತ್ ಸರಬರಾಜು ಆಗುತ್ತಿದೆ. ಆದರೆ ಈ ವಿದ್ಯುತ್ ತಾಲೂಕಿಗೆ ಸ್ವಲ್ಪ ಕೂಡ ಸಾಕಾಗುದಿಲ್ಲ. ಗ್ರಾಹಕರ ಸಂಖ್ಯೆ 3-4 ಪಟ್ಟು ಹೆಚ್ಚಾಗಿದ್ದರೂ ಹಳೆಯ 33ಕೆ.ವಿ ಸಬ್ ಸ್ಟೇಷನ್‌ನಲ್ಲೇ ವಿದ್ಯುತ್ ಪೂರೈಕೆ ಆಗುತ್ತಿದೆ. ಈ ಸಮಸ್ಯೆಯಿಂದ ಬೇಡಿಕೆಗೆ ಅನುಸಾರಾಗಿ ವಿದ್ಯುತ್ ಸರಬರಾಜು ಮಾಡುವ ಸಾಮರ್ಥ್ಯ ಈ ವ್ಯವಸ್ಥೆಗಿಲ್ಲ. ಇದಕ್ಕೆಲ್ಲ ಪರಿಹಾರ110 ಕೆ.ವಿ ಸಬ್‌ಸ್ಟೇಷನ್ ಯಾವಾಗ ಆಗುತ್ತೊ ಎಂದು ಕಾದುನೋಡಬೇಕಾಗಿದೆ.

Related posts

Leave a Reply