Header Ads
Breaking News

ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ

ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದ ಕೆಲಸದ ಸರಾಸರಿ ಕಡಿಮೆ ಇದೆ. ಪಂಚಾಯತ್ ಅಧಿಕಾರಿಗಳು ಸುಳ್ಳು ನೆಪ ಹೇಳಿ ಜಾರಿಕೊಳ್ಳಬೇಡಿ ಪ್ರಮಾಣಿಕವಾಗಿ ಕೆಲಸ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೆಲ್ವಮಣಿ ಎಚ್ಚರಿಸಿದ್ದಾರೆ.

ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸರಕಾರದ ಯಾವ ಯೋಜನೆಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ನರೇಗಾ ಯೋಜನೆಯಡಿಯಲ್ಲಿ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ 90% ಅಧಿಕ ಕೆಲಸ ಆಗಿದೆ. ಆದರೆ ಸುಳ್ಯ ತಾಲೂಕಿನಲ್ಲಿ 80% ಕೆಲಸ ಆಗಿದೆ ಅಷ್ಟೇ ಮೇ ತಿಂಗಳ ಒಳಗೆ ನರೇಗಾದ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು. ತಾಲೂಕಿನಲ್ಲಿ ತೆರೆದ ಬಾವಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪಂಚಾಯತ್ ಅಧಿಕಾರಿಗಳು ಯಾವ ಕಡೆ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ಮನಗಂಡು ಯೋಜನೆಗಳಿಗೆ ಮಂಜೂರಾತಿ ನೀಡಬೇಕು ಎಂದು ಪಿಡಿಒಗಳಿಗೆ ಹೇಳಿದರು.

ನರೇಗಾ ಯೋಜನೆಗಳನ್ನು ಎಲ್ಲಾ ಪಂಚಾಯತ್‍ಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸರಕಾರಿ ಶಾಲೆಗಳಲ್ಲಿ ಆವರಣ ಗೋಡೆಗಳ ನಿರ್ಮಾಣ, ಆಟದ ಮೈದಾನ, ಮತ್ತು ಶೌಚಾಲಯಗಳ ನಿರ್ಮಾಣ ಮಾಡಲು ಅನುದಾನಗಳನ್ನು ಬಳಕೆ ಮಾಡಿಕೊಳ್ಳಬಹುದು. ಸರಕಾರಿ ಶಾಲೆಗಳ ಸುರಕ್ಷತೆಯ ದೃಷ್ಟಿಯಿಂದ ಆವರಣ ಗೋಡೆಗಳ ಅಗತ್ಯ ಇದೆ. ಅಲ್ಲದೇ ಶಾಲೆಯ ಜಾಗವನ್ನು ಖಾಸಾಗಿ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಳ್ಳವುದು ತಪ್ಪುತ್ತದೆ ಎಂದರು. ಆವರಣ ಗೋಡೆಗಳು ಇಲ್ಲದ ಶಾಲೆಗಳ ಬಗ್ಗೆ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರು ನೀಡಬೇಕು ಎಂದರು. ಆವರಣ ಗೋಡೆಗಳು ಇಲ್ಲದ ಶಾಲೆಗಳ ಪಟ್ಟಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ತಾಲೂಕಿನ ಹಲವು ಕಡೆ ಆವರಣ ಗೋಡೆಗಳ ಕೆಲಸ ನಡೆಯುತ್ತಿದೆ ಎಂದು ಶಿಕ್ಷಣಾಧಿಕಾರಿ ಹೇಳಿದರು.

ತಾಲೂಕಿನ ಹಲವು ಕಡೆ ಸಣ್ಣ ಮಟ್ಟದ ಪೇಟೆಗಳಲ್ಲಿ ಹಳ್ಳಿ ಸಂತೆಗಳ ನಿರ್ಮಾಣ ಮಾಡಲು ಎನ್‍ಎನ್‍ಎಂಆರ್ ಯೋಜನೆಯಡಿ ಅನುದಾನಗಳಿವೆ. ಜಾಲ್ಸೂರು, ಸಂಪಾಜೆ ಮುಂತಾದ ಪಂಚಾಯತ್‍ಗಳು ಕಾರ್ಯಗತ ಮಾಡಬೇಕು ಎಂದು ಸೆಲ್ವಮಣಿ ಹೇಳಿದರು.
ತಾಲೂಕಿನ ಸಂಪಾಜೆ ಮತ್ತು ಇತರ ಕೆಲವು ಪಂಚಾಯತ್‍ಗಳ ವಿರುದ್ದ ಘನತ್ಯಾಜ್ಯ ಘಟಕಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ. ಜೂನ್ 6ರ ಒಳಗೆ ಸರಿಯಾದ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸ್ವಚ್ಚ ಭಾರತ್ ಯೋಜನೆಯ ಮಂಜುಳಾ ಅವರು ಹೇಳಿದರು. ಘನತ್ಯಾಜ್ಯ ಘಟಕಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಘನ ತ್ಯಾಜ್ಯ ಘಟಕಗಳು ಮತ್ತು ಪ್ಲಾಸ್ಟಿಕ್ ಸೌಧಗಳನ್ನು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಎಡಿ ಅವರು ಹೋಗಿ ಪರಿಶೀಲನೆ ನಡೆಸಬೇಕು. ಅಲ್ಲದೇ ತಾಲೂಕಿನ ಅರಂತೋಡು ಮತ್ತು ಐವರ್ನಾಡು ಪಂಚಾಯತ್‍ನಲ್ಲಿ ಉತ್ತಮ ಮಟ್ಟದ ಘನತ್ಯಾಜ್ಯ ಘಟಕಗಳ ನಿರ್ಮಾಣ ಆಗಿದೆ. ಈ ಘಟಕಗಳನ್ನು ನೋಡಿ ಇತರ ಪಂಚಾಯತ್‍ಗಳು ಅಳವಡಿಕೆ ಮಾಡಬೇಕು ಎಂದು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಳಿದರು.

ಗ್ರಾಮ ಪಂಚಾಯತ್‍ಗಳಿವೆ ಮೆಸ್ಕಾಂ ಇಲಾಖೆಗಳು ನೀಡುವ ವಿದ್ಯುತ್ ಬಿಲ್‍ಗಳು ಸರಿಯಾಗಿಲ್ಲ. ಇದರಿಂದ ಗ್ರಾಮ ಪಂಚಾಯತ್‍ಗಳಿಗೆ ಸಮಸ್ಯೆಗಳಾಗುತ್ತಿದೆ. ಎಂದು ಗುತ್ತಿಗಾರು ಪಂಚಾಯತ್ ಪಿಡಿಒ ಹೇಳಿದರು. ಈ ಬಗ್ಗೆ ಎಲ್ಲಾ ಪಂಚಾಯತ್‍ಗಳು ಸೂಕ್ತ ವರದಿ ನೀಡಿ ಬಳಿಕ ಮೆಸ್ಕಾಂ ಅಧಿಕಾರಿಗಳು ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದ ಅವರು ಜಿಲ್ಲಾ ಪಂಚಾಯತ್‍ನಲ್ಲಿ 29 ಕೋಟಿ ಅನುದಾನ ಇದೆ. ವಿದ್ಯುತ್ ಬಿಲ್ ಪಾವತಿ ಮಾಡಲು ಮಾಡಲು ಬಾಕಿ ಇರುವ ಪಂಚಾಯತ್‍ಗಳು ಇದರ ಸದ್ಬಲಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.

ಮಳೆಗಾಲ ಆರಂಭವಾಗುತ್ತಿದೆ ಮಳೆಗಾಲ ಆರಂಭವಾಗ ಮೇಲೆ ಯಾವುದೇ ದೂರುಗಳು ಸಾರ್ವಜನಿಕರಿಂದ ಬರಬಾರದು. ಅಂತಹ ದೂರುಗಳು ಬರದ ಹಾಗೇ ಮಳೆಗಾಲ ಆರಂಭಕ್ಕೆ ಮುನ್ನವೇ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೆಲ್ವಮಣಿ ಹೇಳಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಯೋಜನೆಯ ಮಂಜುಳಾ, ಸುಳ್ಯ ತಾ.ಪಂ ಮುಖ್ಯ ಕಾರ್ಯನಿರ್ವಾಹರ್ಣಾಣಾಧಿಕಾರಿ ಶ್ರೀಕಂಠಮೂರ್ತಿ, ತಾ.ಪಂ ಉದ್ಯೋಗ ಖಾತರೀ ಯೋಜನಾ ಅಧಿಕಾರಿ ಭವಾನಿಶಂಕರ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *