Header Ads
Breaking News

ಸುಳ್ಯ ತಾಲೂಕು ಪಂಚಾಯತ್ ಮಾಸಿಕ ಪ್ರಗತಿ ಪರಿಶೀಲನಾ ಸಭೆ

ಸುಳ್ಯ ತಾಲೂಕು ಪಂಚಾಯತ್ ಮಾಸಿಕ ಪ್ರಗತಿ ಪರಿಶೀಲನಾ ಸಭೆ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಶಾಲಾ ಆಟದ ಮೈದಾನದಲ್ಲಿ ರಸ್ತೆ ನಿರ್ಮಾಣ, ಖಾಸಾಗಿಯವರಿಂದ ಒತ್ತುವರಿ ವಿಚಾರದ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಅರಂಬೂರಿನಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ವಿಳಂಬದ ಕುರಿತು ಅಧ್ಯಕ್ಷರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಣ್ಣೇ ಗೌಡರು ಮಾರ್ಚ್ 20 ಕ್ಕೆ ಸೇತುವೆ ಕಾಮಗಾರಿ ಮುಗಿಯುತ್ತದೆ ಎಂದು ಗುತ್ತಿಗೆದಾರರು ಹೇಳಿದರು. ಆದರೆ ಹೇಳಿದ ಸಮಯಕ್ಕೆ ಕಾಮಗಾರಿ ಮುಗಿಸಲು ಸಾಧ್ಯವಾಗುತ್ತಿಲ್ಲ. ಗುತ್ತಿಗೆದಾರರು ಕೆಲಸದಲ್ಲಿ ವೇಗ ತೋರಿಸುತ್ತಿಲ್ಲ. ನಾವು ಅವರಿಗೆ ನೋಟೀಸ್ ಮಾಡ್ತೇವೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣಾಧಿಕಾರಿ ಮಹಾದೇವಾ ಅವರು ಅರಂಬೂರಿನ ಇಡ್ಯಡ್ಕ ಶಾಲೆ ಜಾಗದಲ್ಲಿ ರಸ್ತೆ ಮಾಡುವ ಪ್ರಸ್ತಾಪ ಸರಿಯಲ್ಲ. ಈಗಾಗಲೇ ಅಲ್ಲಿ ಶಾಲಾ ಜಾಗವನ್ನು ಖಾಸಾಗಿಯವರಿಂದ ಅತಿಕ್ರಮಣವೂ ಆಗಿದೆ. ಅತಿಕ್ರಮಣ ಮಾಡಿರುವುದನ್ನು ಸರ್ವೆ ನಡೆಸಿ ಶಾಲೆಗೆ ನೀಡಬೇಕು. ಶಾಲಾ ಜಾಗದಲ್ಲಿ ರಸ್ತೆ ಆದರೆ ಮಕ್ಕಳು ಎಲ್ಲಿ ಆಟವಾಡಬೇಕು ಎಂದು ಪ್ರಶ್ನಿಸಿದರು. ಆಗ ಅಧ್ಯಕ್ಷ ಚನಿಯ ಕಲ್ತಡ್ಕರು ಊರವರಿಗೆ ರಸ್ತೆ ಅಲ್ಲೇ ಆಗಬೇಕೆಂದು ಹೇಳಿದರೆ ನಾವೂ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಶಾಲೆ ಜಾಗವನ್ನು ರಕ್ಷಿಸಲು ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು.

ಅಂಗನವಾಡಿ ಕೇಂದ್ರಗಳಲ್ಲಿರುವ ಆಹಾರ ಸಾಮಾಗ್ರಿಗಳ ಗುಣಮಟ್ಟ ಪರಿಶೀಲನೆ ನಡೆಸಿ ವರದಿ ನೀಡಲು ಹಿಂದಿನ ಸಭೆಯಲ್ಲಿತಾ.ಪಂ ಅಧ್ಯಕ್ಷರು ಸೂಚನೆ ನೀಡಿದ್ದರು. ಇದಕ್ಕೆ ಉತ್ತರಿಸಿದ ಸಿಡಿಪಿಒ ರಶ್ಮೀ ಆಶೋಕ್ ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿರುವ ಆಹಾರ ಸಾಮಾಗ್ರಿಗಳ ಗುಣಮಟ್ಟ ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆಯಲ್ಲಿ ನೆಲಕಡನೆ ಗುಣಮಟ್ಟ ಉತ್ತಮವಾಗಿಲ್ಲದಿರುವುದು ಕಂಡು ಬಂದಿದೆ. ಇದರ ಬಗ್ಗೆ ಪುತ್ತೂರು ಎಮ್.ಎಸ್.ಪಿ.ಟಿ.ಸಿ ಅವರಿಗೆ ತಿಳಿಸಲಾಗಿದ್ದು. ಬಳಿಕ ಉತ್ತಮ ಗುಣಮಟ್ಟದ ನೆಲಕಡಲೆ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ತಾಲೂಕು ಮಟ್ಟದ ಕೆ.ಎಸ್.ಆರ್.ಟಿ.ಸಿ ಅದಾಲತ್ ನಡೆಸಲು ತೀರ್ಮಾನಿಸಲಾಗಿದ್ದು, ತಾಲೂಕು ಪಂಚಾಯತ್ ಇದಕ್ಕೆ ದಿನಾಂಕ ನಿಗದಿ ಪಡಿಸಿ ಅದಾಲತ್ ನಡೆಸಿದಲ್ಲಿ ಘಟಕದ ವತಿಯಿಂದ ಅದಾಲತ್‍ಗೆ ಹಾಜರಾಗಲಾಗುವುದು ಎಂದು ಕೆಎಸ್‍ಆರ್‍ಟಿಸಿ ಡಿಪೋ ಮೆನೇಜರ್ ಹೇಳಿದರು.

ವಿದ್ಯುತ್ ಪರಿವರ್ತಕಗಳನ್ನು ಆಳವಡಿಸುವಾಗ ಸ್ಥಳೀಯರಿಂದ ಸುಮಾರು 40000 ರದವರೆಗೆ ಹಣ ಸಂಗ್ರಹಣೆ ನಡೆಯುತ್ತಿದೆ ಎಂದು ತಾ.ಪಂ ಅಧ್ಯಕ್ಷರು ಇದೇ ಸಂದರ್ಭದಲ್ಲಿ ಹೇಳಿದರು. ರಾಜ್ಯದಲ್ಲಿ ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಭಯದಲ್ಲಿ ಕೋಳಿಗಳಿಂದ ವೈರಸ್ ಹರಡುತ್ತದೆ ಎಂದು ಕೆಲವು ವದಂತಿಗಳಿಂದ ಕುಕ್ಕೊಟೋದ್ಯಮ ಕುಸಿದಿದೆ. ಜೀವನ ನಿರ್ವಹಣೆಗೆ ಮಾಡಿಕೊಂಡಿದ್ದ ಉದ್ಯಮದಿಂದ ಈಗ ಜೀವನ ನಡೆಸಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಪಶು ವೈದ್ಯಾಧಿಕಾರಿ ಮನವಿ ಮಾಡಿಕೊಂಡರು.

ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ಶುಭದಾ ರೈ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ತಹಶೀಲ್ದಾರ್ ಅನಂತಶಂಕರ್, ಇ.ಒ.ಭವಾನಿ ಶಂಕರ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *