Header Ads
Breaking News

ಸುಳ್ಯ ನಗರ ಪಂಚಾಯತ್‌ನಲ್ಲಿ ಪೌರ ಕಾರ್ಮಿಕರ ದಿನಾಚರಣೆ

ವೈದ್ಯರುಗಳು ರೋಗ ಬಂದ ಮೇಲೆ ಪತ್ತೆ ಹಚ್ಚಿ ಔಷಧಿ ನೀಡುತ್ತಾರೆ. ಆದರೆ ಪೌರ ಕಾರ್ಮಿಕರು ರೋಗ ಬರುವ ಮೊದಲೇ ಸಮಾಜ ಸ್ವಚ್ಚ ಮಾಡಿ ರೋಗ ಬರದ ಹಾಗೆ ತಡೆಯುತ್ತಾರೆ. ಇಂತಹ ಪೌರ ಕಾರ್ಮಿಕರಿಗೆ ನಿಮ್ಮ ಅನುಕಂಪ ಬೇಕಾಗಿಲ್ಲ. ಬದಲಾಗಿ ಸೌಲಭ್ಯಗಳ ಅಗತ್ಯ ಇದೆ ಎಂದು ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ ಹೇಳಿದರು. ಅವರು ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷೆ ವಹಿಸಿ ಮಾತನಾಡಿದರು. ದಿನಾಚರಣೆಯನ್ನು ಪೌರಕಾರ್ಮಿಕರು ಒಗ್ಗೂಡಿ ಉದ್ಘಾಟಿಸಿದರು. ವೇದಿಕೆಯಲ್ಲಿ ನಗರ ಪಂಚಾಯತ್ ಆರೋಗ್ಯಾಧಿಕಾರಿ ರವಿಕೃಷ್ಣ, ನೌಕರರ ಸಂಘದ ಅಧ್ಯಕ್ಷ ತಿಮ್ಮಪ್ಪ ಪಾಟಲಿ, ಕಂದಾಯ ನಿರೀಕ್ಷಕ ಧನಂಜಯ, ನಗರ ಪಂಚಾಯತ್ ಸದಸ್ಯರು, ಸಿಬ್ಬಂಧಿಗಳು ಪೌರಕಾರ್ಮಿಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *