

ಸುಳ್ಯ: ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವವು ಜ.16ರಿಂದ ಜ. 21ರವರೆಗೆ ನಡೆಯಲಿದ್ದು, ಶ್ರೀ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ಇಂದು ಬೆಳಿಗ್ಗೆ ನಡೆಯಿತು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರಾದ ರಾಮಚಂದ್ರ ಶಬರಾಯ ಪೂಜಾ ಕಾರ್ಯಕ್ರಮ ನೆರೆವೇರಿಸಿದರು .
ಆಡಳಿತಾಧಿಕಾರಿ ಪದ್ಮನಾಭ. ಕೆ.ನೆಟ್ಟಾರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ , ಸಮಿತಿ ಸದಸ್ಯರಾದ ವೆಂಕಟಕೃಷ್ಣ ರಾವ್, ಜಯಪ್ರಕಾಶ ರೈ,ಜಗನ್ನಾಥ ರೈ,ದಾಮೋದರ ನಾಯ್ಕ,ನಾರಾಯಣ ಕೊಂಡೆಪ್ಪಾಡಿ ಹಾಗೂ ಅಮರ್ ನಾಥ ಶೆಟ್ಟಿ ಪೆರುವಾಜೆಗುತ್ತು.ಮಾಜಿ ವ್ಯವಸ್ಥಾಪನಾ ಅಧ್ಯಕ್ಷರಾದ ನಿರಂಜನ ಶೆಟ್ಟಿ ಪಾಲ್ತಾಡು,ಭೋಜರಾಜ ಶೆಟ್ಟಿ ಕಲ್ಕಂಪಾಡಿಗುತ್ತು, ಮೋನಪ್ಪ ಪೂಜಾರಿ, ವಿಜಯ ಪೆರುವಾಜೆ, ರಮೇಶ ಮಠತ್ತಡ್ಕ, ದೇವಸ್ಥಾನದ ವ್ಯವಸ್ಥಾಪಕ ವಸಂತ ಆಚಾರ್ಯ ಪೆರುವಾಜೆ ಉಪಸ್ಥಿತರಿದ್ದರು.
- ವರದಿ : ಪ್ರಮೀಳಾ ಶೆಟ್ಟಿ ಪೆರುವಾಜೆ.