

ಸುಳ್ಯ ತಾಲೂಕಿನ ಪೆರುವಾಜೆ ಶ್ರೀ ಜಲದುರ್ಗಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಜ.16 ರಿಂದ ಜ.21 ರವರೆಗೆ ನಡೆಯಲಿದೆ.
ಆ ಪ್ರಯುಕ್ತ ಚಪ್ಪರ ಮುಹೂರ್ತವು ಡಿ.18 ರಂದು ಬೆಳಿಗ್ಗೆ ಗಂಟೆ 9.30 ಕ್ಕೆ ನಡೆಯಲಿದೆ. ಭಕ್ತಾಧಿಗಳು ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಮತ್ತು ಆಡಳಿತಾಧಿಕಾರಿ ಪದ್ಮನಾಭ ನೆಟ್ಟಾರು ತಿಳಿಸಿದ್ಧಾರೆ.