Header Ads
Breaking News

ಸೆ. 29ರಂದು ಸ್ವಚ್ಚ ಸುರತ್ಕಲ್ ಅಭಿಯಾನದ 50ನೇ ಶ್ರಮದಾನ

ಸುರತ್ಕಲ್‍ನ ನಾಗರಿಕಾ ಸಲಹಾ ಸಮಿತಿಯ ವತಿಯಿಂದ ನಾಗರಿಕಾ ಸೆ. 29ರಂದು ಸ್ವಚ್ಚ ಸುರತ್ಕಲ್ ಅಭಿಯಾನದ 50ನೇ ಶ್ರಮದಾನ ನಡೆಯಲಿದ್ದು, ಅದರ ಅಂಗವಾಗಿ ಸ್ವಚ್ಚತಾ ಜಾಗೃತಿ ಹಾಗೂ 2ನೇ ಹಂತದ ಸ್ವಚ್ಚ ಸುರತ್ಕಲ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಸುರತ್ಕಲ್ ವಿದ್ಯಾದಾಯಿನೀ ಪೌಢ ಶಾಲೆಯ ವಜ್ರಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ ಅಂತ ನಾಗರಿಕಾ ಸಲಹಾ ಸಮಿತಿಯ ಸತೀಶ್ ಆನಂದ್ ಹೇಳಿದ್ರು. ಅವರು ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರಿನ ರಾಮಕೃಷ್ಣ ಮಿಶನ್, ನಾಗರಿಕಾ ಸಲಹಾ ಸಮಿತಿ ಸುರತ್ಕಲ್ ಹಾಗೂ ವಿವಿಧ ಮನಸ್ಕ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ರಾಮಕೃಷ್ಣ ಮಿಷನ್ ಸ್ವಚ್ಚ ಸುರತ್ಕಲ್ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಅಭಿಯಾನದಲ್ಲಿ ಸುಮಾರು 80ಕ್ಕೂ ಮಿಕ್ಕಿ ಶಾಲಾ ಕಾಲೇಜುಗಳಲ್ಲಿ ಸಂಚಾರ ಸುರಕ್ಷತೆ ಹಾಗೂ ರಸ್ತೆ ನಿಯಮಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗಿದೆ ಅಂತ ಹೇಳಿದ್ರು. ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ನಾಗರಿಕಾ ಸಲಹಾ ಸಮಿತಿಯ ಅಧ್ಯಕ್ಷ ಜೆಡಿ ವೀರಪ್ಪ, ರೋಟರಿ ಕ್ಲಬ್‍ನ ಶ್ರೀನಿವಾಸ್ ರಾವ್, ಸ್ವಚ್ಚ ಭಾರತ್ ಅಭಿಯಾನದ ಸಂಯೋಜಕರಾದ ಸತೀಶ್ ಸದಾನಂದ್ ಹಾಗೂ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *