Header Ads
Header Ads
Breaking News

ಸೊರಕೆಗೆ ಸ್ವಕ್ಷೇತ್ರದಲ್ಲಿ ರಾಜಕೀಯ ಅಸ್ಥಿತ್ವ ಕಳೆದುಕೊಳ್ಳುವ ಭೀತಿ.. : ಸುದ್ದಿಗೋಷ್ಠಿಯಲ್ಲಿ ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್ ರಾವ್ ಕಿಡಿ

ಕಾಪು ಕ್ಷೇತ್ರದಲ್ಲಿ ಅಸ್ಥಿತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ತನ್ನ ರಾಜಕೀಯ ಅಸ್ಥಿತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂತ್ರಸ್ಥರಿಗೆ ಅಗತ್ಯವಿಲ್ಲದಿದ್ದರೂ, ಸಂತ್ರಸ್ಥರ ಅನುಪಸ್ಥಿತಿಯಲ್ಲಿ ಬಾಡಿಗೆ ಜನರನ್ನು ಸೇರಿಸಿಯೋ ಎಂಬಂತ್ತೆ ಐಎಸ್‌ಪಿಆರ್‌ಎಲ್ ವಿರುದ್ಧ ಪ್ರತಿಭಟಿಸುವ ಡೊಂಬರಾಟ ಮಾಡಿದ್ದಾರೆ ಎಂಬುದಾಗಿ ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್ ರಾವ್ ಕಿಡಿಕಾರಿದ್ದಾರೆ.
ಈ ಭಾಗದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸಹಿತ ಗ್ರಾ.ಪಂ. ಸದಸ್ಯರನ್ನು ಸೇರಿಸಿಕೊಂಡು ಕಾಪು ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟಿಸುವುದು ಅವರ ಹಕ್ಕು, ಆದರೆ ಪ್ರತಿಭಟನೆಯ ಹಿಂದೆ ರಾಜಕೀಯ ದುರುದ್ಧೇಶ ಸಲ್ಲದು, ಪಾದೂರಿನಲ್ಲಿರುವ ಐಎಸ್‌ಪಿಆರ್‌ಎಲ್ ಘಟಕದ ಒಂದನೇ ಹಂತದ ಯೋಜನೆಯಿಂದ ಸಂತ್ರಸ್ಥರಾದವರಿಗೆ ಪರಿಹಾರ ಮತ್ತು ಎರಡನೇ ಹಂತದ ವಿಸ್ತರಣೆಯಲ್ಲಿ ನಿರ್ವಸಿತರಿಗೆ ನ್ಯಾಯ ದೊರಕಿಸಿ ಕೊಡುವಂತೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ಸೊರಕೆ ನೇತೃತ್ವದಲ್ಲಿ ಜಾಥ-ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು, ಈ ಪ್ರತಿಭಟನೆ ರಾಜಕೀಯ ಪ್ರೇರಿತ ಎಂಬುದರಲ್ಲಿ ಎರಡು ಮಾತಿಲ್ಲ, ಕಾರಣ ಈ ಹಿಂದೆ ಇವರೇ ಶಾಸಕರಾಗಿದ್ದ ಸಂದರ್ಭ ಸ್ಥಳೀಯ ಜನಜಾಗೃತಿ ಸಮಿತಿ ಸಹಿತ ಎಲ್ಲಾ ರಾಜಕೀಯ ಮುಖಂಡರನ್ನು ಸೇರಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿ ಬಹುತೇಕ ಫಲ ಕಂಡಿದ್ದೇವೆ. ಈ ಹೋರಾಟ ಪಕ್ಷೇತೀತವಾಗಿ ನಡೆದಿರುವುದು ಸ್ವತಃ ಸೊರಕೆಗೂ ಗೊತ್ತಿದೆ. ಆದರೆ ಇದೀಗ ನಲೆ ಕಚ್ಚಿದ ರಾಜಕೀಯ ಭವಿಷ್ಯಕ್ಕಾಗಿ ಇಲ್ಲ ಸಲ್ಲದ ಆರೋಪ ಮಾಡುವ ಸೊರಕೆ, ತನ್ನ ಭಾಷಣದುದ್ದಕ್ಕೂ ಜಿ.ಪಂ., ತಾ.ಪಂ., ಗ್ರಾ.ಪಂ. ಸದಸ್ಯರು ಕಂಪನಿಯ ದಲ್ಲಾಳಿಗಳಂತ್ತೆ ಕೆಲಸ ಮಾಡುತ್ತಿದ್ದಾರೆ, ಕಾಮಗಾರಿ ಗುತ್ತಿಗೆ ಮತ್ತು ಜಾಗದ ಕಮಿಷನ್ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡುತ್ತಿದ್ದು, ಇದು ಸೊರಕೆಯ ಹತಾಶ ಮನೋಭಾವವನ್ನು ಎತ್ತಿ ತೋರಿಸುತ್ತಿದೆ ಎಂದರು.

Related posts

Leave a Reply

Your email address will not be published. Required fields are marked *