Header Ads
Header Ads
Breaking News

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಗೋಪೂಜೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸುಪ್ರಸಿದ್ದಿ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಶ್ರೀ ಕಾಮಧೇನು ಗೋಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ನೆರವೇರಿತು.

ಶ್ರೀ ಕ್ಷೇತ್ರದ ಅರ್ಚಕರಾದ ಸುಬ್ರಹ್ಮಣ್ಯ ತೋಡ್ತಿಲ್ಲಾಯ ಇವರು ಗೋಪೂಜೆ ನೆರವೇರಿಸಿದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸಮಿತಿಯ ಸದಸ್ಯರುಗಳಾದ ಪಿ. ವಿಶ್ವನಾಥ ಶೆಟ್ಟಿ, ವಿಶ್ವನಾಥ ಕೊಲ್ಲಾಜೆ, ಅಣ್ಣಪ್ಪ ಗೌಡ ಕಾಶಿ, ಗಣೇಶ ಪಿ.ಕೆ., ಪ್ರಶಾಂತ್ ರೈ ಆರಂತಬೈಲು, ಸಿನಿ ಗುರುದೇವನ್, ಸೌಮ್ಯ ಪ್ರಕಾಶ್, ಸುಚಿತ್ರಾ ಕೊಲ್ಲಾಜೆ, ಉದ್ಯಮಿ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply