Header Ads
Header Ads
Breaking News

ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ ಮಂಜೇಶ್ವರ ಪೊಲೀಸ್ ಠಾಣೆ

ಕರ್ನಾಟಕ ಕೇರಳ ಗಡಿ ಪ್ರದೇಶ ಮಂಜೇಶ್ವರದಲ್ಲಿರುವ ಪೊಲೀಸ್ ಠಾಣೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಗಡಿಪ್ರದೇಶದಲ್ಲಿರುವ ಠಾಣೆಯ ಮೇಲೆ ಒತ್ತಡ ವಿಪರೀತವಿದ್ದರೂ, ಸೂಕ್ತ ಸೌಲಭ್ಯಗಳ ಕೊರತೆಯಿಂದ ಸಿಬ್ಬಂದಿ ಪರದಾಡುವಂತಾಗಿದೆ. ಕರ್ನಾಟಕ ಕೇರಳ ಗಡಿಭಾಗದಲ್ಲಿರುವ ಮಂಜೇಶ್ವರದಲ್ಲಿರುವ ಪೊಲೀಸ್ ಠಾಣೆಗೆ ಇದೀಗ ಕಾಯಕಲ್ಪ ಒದಗಿಸಬೇಕಾದ ದುಸ್ಥಿತಿ ಎದುರಾಗಿದೆ. ಮಂಜೇಶ್ವರದಲ್ಲಿ ಸ್ಥಾಪಣೆಯಾಗಿರುವ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಠಾಣಾಧಿಕಾರಿ, 2 ಅಡಿಷನಲ್ ಎಸ್ಸೈ, 1ಗ್ರೇಡ್ ಎಸ್ಸೈ ಸೇರಿದಂತೆ ಮೊತ್ತ 39 ಪೊಲೀಸ್ ಸಿಬ್ಬಂದಿಗಳು ಇದ್ದರೂ ಈ ಠಾಣೆಯ ವ್ಯಾಪ್ತಿ ವಿಶಾಲವಾಗಿರುವುದರಿಂದ ಇರುವ ಸಿಬ್ಬಂದಿಗಳ ಸಂಖ್ಯೆ ಸಾಲುತ್ತಿಲ್ಲ. ಜೊತೆಗೆ ಇಲ್ಲಿ ಮೂರು ಜೀಪುಗಳಿದ್ದರೂ ಗಸ್ತು ತಿರುಗಾಡಕ್ಕೆ ಇದು ಸಾಕಾಗುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ.

ಮಂಜೇಶ್ವರ ಠಾಣೆಗೆ ಜವಾಬ್ದಾರಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಉಪ್ಪಳದಲ್ಲಿ ಒಂದು ಠಾಣೆಯನ್ನು ಸ್ಥಾಪಿಸಬೇಕೆಂಬ ಹಲವು ಕಾಲದ ಬೇಡಿಕೆ ಈ ತನಕ ಸಾಕಾರಗೊಳ್ಳಲಿಲ್ಲ. ಉಪ್ಪಳದಲ್ಲೊಂದು ಠಾಣೆ ಸ್ಥಾಪಣೆಯಾದರೆ ಅಪರಾಧ ನಡೆಯುತ್ತಿರುವ ಸ್ಥಳಗಳಿಗೆ ಕರೆ ಬಂದ ಕೂಡಲೇ ತಲುಪ ಬಹುದಾಗಿದೆ. ಅದಲು ಬದಲಾಗಿ ಆಡಳಿತವನ್ನು ನಡೆಸುತ್ತಿರುವ ಯುಡಿಎಫ್ ಹಾಗೂ ಎಲ್ ಡಿ ಎಫ್ ಸರಕಾರಗಳು ಉಪ್ಪಳದಲ್ಲಿ ಠಾಣೆಯನ್ನು ಸ್ಥಾಪಿಸುವ ವಿಷಯದಲ್ಲಿ ವಿಫಲವಾಗಿರುವುದಾಗಿ ಊರವರು ಹೇಳುತಿದ್ದಾರೆ.ಮಂಜೇಶ್ವರಕ್ಕೆ ಕರ್ತವ್ಯಕ್ಕೆ ಬರುತ್ತಿರುವ ಪೊಲೀಸರಿಗೆ ಭಾಷಾ ಸಮಸ್ಯೆ ಕೂಡಾ ಎದುರಾಗುತ್ತಿದೆ. ಅತ್ಯಧಿಕ ಮಂದಿ ತುಳು ಹಾಗೂ ಕನ್ನಡ ಭಾಷೆಯನ್ನು ಆಡುತ್ತಿರುವ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕೇರಳದಿಂದ ವರ್ಗಾವಣೆಯಾಗಿ ಬರುತ್ತಿರುವ ಪೊಲೀಸರು ಭಾಷೆಯನ್ನು ಅರ್ಥೈಸಲು ಸ್ವಲ್ಪ ಸಮಯವೇ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಭಾಷೆಯನ್ನೇ ಅರಿತಿರುವ ಪೊಲೀಸರನ್ನೇ ಗಡಿ ಪ್ರದೇಶಕ್ಕೆ ನೇಮಿಸಬೇಕೆಂಬ ಬೇಡಿಕೆ ಕೂಡಾ ಕೇಳಿ ಬರುತ್ತಿದೆ.

ದೂರದ ಊರಿನಿಂದ ಕರ್ತವ್ಯಕ್ಕಾಗಿ ಆಗಮಿಸುತ್ತಿರುವ ಪೊಲೀಸರಿಗೆ ಯಾತ್ರ ಸೌಕರ್ಯ ಕೂಡಾ ಸಮಸ್ಯೆಯಾಗುತ್ತಿದೆ. ಮಂಜೇಶ್ವರ ರೈಲ್ವೇ ನಿಲ್ದಾಣಗಳಲ್ಲಿ ಎಲ್ಲಾ ರೈಲುಗಳಿಗೂ ನಿಲುಗಡೆಯನ್ನು ನೀಡದೇ ಇರುವುದರಿಂದ ಮಂಜೇಶ್ವರಕ್ಕೆ ನಿಗದಿತ ಸ್ದಮಯಕ್ಕೆ ಇವರಿಗೆ ತಲುಪಲು ಸಾಧ್ಯವಾಗುತ್ತಿಲ್ಲವೆಂಬ ಮಾತುಗಳು ಪೊಲೀಸರಿಂದಲೇ ಕೇಳಿ ಬರುತ್ತಿದೆ.ಈ ನಿಟ್ಟಿನಲ್ಲಿ ಊರವರು ಶ್ರಮ ಪಟ್ಟು ಮಂಜೇಶ್ವರದಲ್ಲಿ ಎಲ್ಲಾ ರೈಲುಗಳಿಗೂ ನಿಲುಗಡೆಯನ್ನು ನೀಡಲು ಒತ್ತಾಯ ನಡೆಸಬೇಕಾಗಿದೆ.ಈಗಿರುವ ಮಂಜೇಶ್ವರ ಠಾಣೆ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತಿದ್ದು, ಸೌಕರ್ಯದ ಕೊರತೆ ಕೂಡಾ ಇದೆ. ವಾಹನಗಳನ್ನು ನಿಲ್ಲಿಸಲು ಸೂಕ್ತವಾದ ರೀತಿಯ ಸ್ಥಳಾವಕಾಶ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಠಾಣೆಯ ಹೊರ ಭಾಗದಲ್ಲಿ ಹಾಗೂ ಸಮೀಪದಲ್ಲೇ ಇರುವ ಕ್ಷೇತ್ರದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಅನಧಿಕೃತವಾಗಿ ಸಾಗಾಟ ಮಾಡುತ್ತಿರುವ ಮಧ್ಯ, ಮರಳು ಅದೇ ರೀತಿ ಅಪಘಾಕ್ಕೀಡಾದ ವಾಹನಗಳನ್ನು ವಶಕ್ಕೆ ತೆಗೆದು ತಂದರೆ ಠಾಣೆಯ ಹೊರ ಭಾಗದಲ್ಲೇ ನಿಲ್ಲಿಸಬೇಕಾದ ಪರಿಸ್ಥಿತಿ . ಇಂತಹ ಸ್ಥಳಗಳಲ್ಲಿ ನಿಲ್ಲಿಸಿದರೆ ಅದರ ಬಿಡಿಭಾಗಗಳು ಕಳವಾಗುವ ಸಾಧ್ಯತೆಯನ್ನು ಕೂಡಾ ಅಲ್ಲಗೆಳೆಯುವಂತಿಲ್ಲ.

ಕಾನೂನು ಪಾಲಕರಾಗಿ ಕರ್ತವ್ಯದೊಂದಿಗೆ ಜನ ಸೇವೆಗೂ ಆಧ್ಯತೆಯನ್ನು ನೀಡುತ್ತಿರುವ ಪೊಲೀಸರ ಸಮಸ್ಯೆಗೊಂದು ತುರ್ತು ಪರಿಹಾರ ಆವಶ್ಯಕವಾಗಿದೆ. ಸಂಬಂಧ ಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಪೊಲೀಸರು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.

Related posts

Leave a Reply